alex Certify ಪಾಕಿಸ್ತಾನದಿಂದ ಭಾರತಕ್ಕೆ 4 ರೂಪಾಯಿ ರೈಲು‌ ದರ;‌ ಸೋಶಿಯಲ್‌ ಮೀಡಿಯಾದಲ್ಲಿ ಟಿಕೆಟ್ ಫುಲ್ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಿಂದ ಭಾರತಕ್ಕೆ 4 ರೂಪಾಯಿ ರೈಲು‌ ದರ;‌ ಸೋಶಿಯಲ್‌ ಮೀಡಿಯಾದಲ್ಲಿ ಟಿಕೆಟ್ ಫುಲ್ ವೈರಲ್

ನವದೆಹಲಿ: ಈ ಶೀರ್ಷಿಕೆ ನೋಡಿ ತಬ್ಬಿಬ್ಬಾಗಬಹುದು. ಪಾಕಿಸ್ತಾನದಿಂದ ಭಾರತಕ್ಕೆ ಹೋಗಲು ನಾಲ್ಕು ರೂಪಾಯಿಗಳೇ, ಇದೇನು ಕನಸಿನಲ್ಲಾ ಎಂದು ಕೇಳಬಹುದು. ಆದರೆ ಇದು ಕನಸಲ್ಲ, ನಿಜಕ್ಕೂ ನಾಲ್ಕೇ ನಾಲ್ಕು ರೂಪಾಯಿಗಳು.

ಹಾಗೆಂದು ಅದು ಈಗಿನ ದರವಲ್ಲ. ಇತ್ತೀಚೆಗೆ ಹಳೆಯ ಬಿಲ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಟ್ರೆಂಡ್​ ಶುರುವಾಗಿದೆ. ಅದೇ ರೀತಿ 17-09-1947 ರ ಬಿಲ್​ ಒಂದು ಈಗ ವೈರಲ್​ ಆಗಿದೆ. ಪಾಕಿಸ್ತಾನದ ರಾವಲ್ಪಿಂಡಿ ಮತ್ತು ಅಮೃತಸರ ನಡುವೆ ಪ್ರಯಾಣಿಸುವ ಟಿಕೆಟ್ ಇದಾಗಿದ್ದು, ಒಂಬತ್ತು ಮಂದಿಗೆ ಈ ಟಿಕೆಟ್ ನೀಡಲಾಗಿದೆ. ಅದೂ ಎಸಿ-3 ಕೋಚ್​ಗೆ ಇಷ್ಟು ಬೆಲೆ !

9 ಮಂದಿಗೆ 36 ರೂಪಾಯಿ 9 ಆಣೆಗಳನ್ನು ವಿಧಿಸಲಾಗಿತ್ತು. ಅದರ ಅರ್ಥ ಒಬ್ಬರಿಗೆ ನಾಲ್ಕು ರೂಪಾಯಿಗಳು ! ಜಾಲತಾಣದಲ್ಲಿ ವೈರಲ್ ಆಗಿರುವ ರೈಲ್ ಟಿಕೆಟ್ ಅನ್ನು ಪಾಕಿಸ್ತಾನ್ ರೈಲ್ ಲವರ್ಸ್ ಹೆಸರಿನ ಪೇಜ್ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದೆ. ಟಿಕೆಟ್‌ನ ಚಿತ್ರವನ್ನು ಹಂಚಿಕೊಂಡ ಪಾಕಿಸ್ತಾನ್ ರೈಲ್ ಲವರ್ಸ್ ಹೀಗೆ ಬರೆದಿದ್ದಾರೆ.

“ಸ್ವಾತಂತ್ರ್ಯದ ನಂತರ 17-09-1947 ರಲ್ಲಿ 9 ಜನರಿಗೆ, ರಾವಲ್ಪಿಂಡಿಯಿಂದ ಅಮೃತಸರಕ್ಕೆ ಪ್ರಯಾಣಿಸಲು 36 ರೂಪಾಯಿ ಮತ್ತು 9 ಆಣೆ. ರೈಲ್ವೆ ಟಿಕೆಟ್‌ನ ಚಿತ್ರ ಇಲ್ಲಿದೆ. ಬಹುಶಃ ಒಂದು ಕುಟುಂಬ ಭಾರತಕ್ಕೆ ವಲಸೆ ಹೋಗಿರಬಹುದು” ಎಂದು ಬರೆದುಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...