alex Certify ತಲೆ ತಿರುಗಿಸುವಂತಿದೆ ಈ ಹವಾಯಿ ಚಪ್ಪಲಿ ಬೆಲೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುವಂತಿದೆ ಈ ಹವಾಯಿ ಚಪ್ಪಲಿ ಬೆಲೆ….!

ಆನ್‌ಲೈನ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತಾವಾದರೂ ಕೆಲವೊಮ್ಮೆ ಕೆಲ ವಸ್ತುಗಳ  ಬೆಲೆ ಹುಬ್ಬೇರಿಸುವಂತೆ ಮಾಡುತ್ತದೆ. ಇದಕ್ಕೆ ಉದಾಹರಣೆಯೊಂದು ಇಲ್ಲಿದೆ.

ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಹ್ಯೂಗೋ ಬಾಸ್ ತನ್ನ ಹೊಸ ಉತ್ಪನ್ನದೊಂದಿಗೆ ಬಂದಿದ್ದು, ನೀಲಿ ಫ್ಲಿಪ್-ಫ್ಲಾಪ್ ಗೆ 8,990 ರೂ. ಬೆಲೆ ನಿಗದಿಪಡಿಸಲಾಗಿದೆ. ಹೌದು, ಬಾತ್‌ ರೂಮ್‌ ಚಪ್ಪಲಿ ಅಥವಾ ಹವಾಯಿ ಚಪ್ಪಲಿಗಳಂತೆ ಕಾಣುವ ಫ್ಲಿಪ್-ಫ್ಲಾಪ್‌ ನ ಈ ಬೆಲೆ ತಲೆತಿರುಗಿಸುವಂತಿದೆ.

ಈ  ಚಪ್ಪಲಿ ಬೆಲೆ ಕುರಿತಂತೆ ಇದೀಗ ಟ್ವಿಟ್ಟರ್‌ ನಲ್ಲಿ ಹಾಸ್ಯಭರಿತ ಕಮೆಂಟ್‌ ಗಳನ್ನು  ಹಾಕಲಾಗುತ್ತಿದೆ. ಒಬ್ಬರಂತೂ ಇದಕ್ಕೆ 150 ರೂಪಾಯಿಗಿಂತ ಹೆಚ್ಚು ಕೊಡಲು  ಸಾಧ್ಯವೇ ಇಲ್ಲ ಎಂದಿದ್ದಾರೆ.

ಕೆಲವು ತಿಂಗಳ ಹಿಂದೆ, Balenciaga “ವಿಶ್ವದ ಅತ್ಯಂತ ದುಬಾರಿ ಕಸದ ಚೀಲ” ವನ್ನು ಬಿಡುಗಡೆ ಮಾಡಿದ್ದು, ಇದಕ್ಕೆ USD 1,790 (ಅಂದಾಜು ರೂ. 1,42,569) ನಿಗದಿಪಡಿಸಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...