alex Certify ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 109 ವರ್ಷದ ವೃದ್ಧ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೀರ್ಘಾಯುಷ್ಯದ ಗುಟ್ಟು ಬಿಚ್ಚಿಟ್ಟ 109 ವರ್ಷದ ವೃದ್ಧ…!

ನಿಮ್ಮಿಷ್ಟದ ಕೆಲಸಗಳನ್ನು ಮಾಡುತ್ತಿರುವುದು ಬಹಳ ಮುಖ್ಯ. ಸೀಮಿತ ಪ್ರಮಾಣದಲ್ಲಿ ಹೀಗೆ ಮಾಡದೇ ಇದ್ದಲ್ಲಿ ನಿಮ್ಮನ್ನು ನೀವು ದೈಹಿಕವಾಗಿ ಇಲ್ಲ ಮಾನಸಿಕವಾಗಿ ಗಾಯಗೊಳಿಸಿಕೊಳ್ಳುವಿರಿ ಎನ್ನುವ 109 ವರ್ಷದ ಜಾನ್ ಟಿನ್ನಿಸ್‌ವುಡ್ ಬ್ರಿಟನ್‌‌ನ ಒಂಬತ್ತನೇ ಹಿರಿಯ ವ್ಯಕ್ತಿಯಾಗಿದ್ದಾರೆ.

ತಮ್ಮ ಆರೋಗ್ಯ ಹಾಗೂ ಭವಿಷ್ಯದ ಕುರಿತು ತಲೆಯೇ ಕೆಡಿಸಿಕೊಳ್ಳದ ಜಾನ್, ಪ್ರತಿ ಶುಕ್ರವಾರ ಸಂಜೆ ತಮ್ಮ ಮೆಚ್ಚಿನ ಚಿಪ್ಪಿ ಟೀ ಹಾಗೂ ಫಿಶ್ ಅಂಡ್ ಚಿಪ್ಸ್‌ ಕಾಂಬೋ ಎಂಜಾಯ್ ಮಾಡುತ್ತಾರೆ.

”ನಿಮ್ಮ ಇಚ್ಛೆಯಂತೆ ಇರಲು ಹಿಂಜರಿಯದಿರಿ,” ಎನ್ನುವ ಜಾನ್, ”ಯಾವುದೇ ಆದರೂ ಅತಿಯಾದರೆ ಒಳ್ಳೆಯದಲ್ಲ,” ಎಂದು ಇದೇ ವೇಳೆ ಕಿವಿಮಾತನ್ನೂ ಹೇಳುತ್ತಾರೆ.

ಮೊದಲ ವಿಶ್ವ ಮಹಾಯುದ್ಧಕ್ಕೂ ಸ್ವಲ್ಪವೇ ಮುನ್ನ, 1912ರಲ್ಲಿ ಜನಿಸಿದ ಜಾನ್, ದ್ವಿತೀಯ ವಿಶ್ವ ಮಹಾಯುದ್ಧದ ವೇಳೆ ರಾಯಲ್ ಮೇಲ್‌ನಲ್ಲಿ ಕೆಲಸ ಮಾಡಿದ್ದಾರೆ. ದೃಷ್ಟಿ ಶಕ್ತಿ ಅಷ್ಟು ಚೆನ್ನಾಗಿ ಇಲ್ಲದೇ ಇದ್ದ ಕಾರಣ ಸಶಸ್ತ್ರ ಪಡೆಗಳನ್ನು ಸೇರಲು ಸಾಧ್ಯವಾಗದೇ ಅಕೌಂಟೆಂಟ್ ಕೆಲಸಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ ಜಾನ್.

ಮಡದಿ ಬೋಲ್ಡ್‌ವೆನ್‌ ಜೊತೆಗೆ 1942ರಲ್ಲಿ ಜಾನ್ ಹಸೆಮಣೆ ಏರಿದ್ದಾರೆ. ಸದ್ಯ ಜಾನ್‌ ವೃದ್ಧಾಶ್ರಮವೊಂದರಲ್ಲಿ ಜೀವಿಸುತ್ತಿದ್ದಾರೆ.

ತಮ್ಮ 100ನೇ ಹುಟ್ಟುಹಬ್ಬವಾದ ಬಳಿಕ ಮುಂದಿನ ಪ್ರತಿ ಹುಟ್ಟುಹಬ್ಬಕ್ಕೂ ಜಾನ್‌ಗೆ ರಾಣಿಯಿಂದ ವಿಶೇಷ ಟೆಲಿಗ್ರಾಂಗಳು ಬಂದಿವೆ.

ಖಾದ್ಯದ ಮೂಲಕ ಇಂಗ್ಲೆಂಡ್‌ – ಇಟಲಿ ಅಭಿಮಾನಿಗಳನ್ನು ಅವಮಾನ ಮಾಡಿತಾ ಜಪಾನ್‌ ಡೊಮಿನೋಸ್…?

ತಮ್ಮ 113ನೇ ವಯಸ್ಸಿನಲ್ಲಿ ಮೃತಪಟ್ಟ ಹೆನ್ರಿ ಅಲ್ಲಿಂಗ್ಹಾಮ್, ಬ್ರಿಟನ್‌ನ ಅತ್ಯಂತ ಹಿರಿಯ ವ್ಯಕ್ತಿ ಎಂದು ದಾಖಲಿಸಲ್ಪಟ್ಟಿದ್ದಾರೆ. ಈತ ಒಂದು ತಿಂಗಳ ಮಟ್ಟಿಗೆ, ಭೂಮಂಡಲದ ಮೇಲಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...