ಲ್ಯಾಪ್ಟಾಪ್ ಅತ್ಯಂತ ಪ್ರಚಲಿತ ಎಲೆಕ್ಟ್ರಿಕ್ ಸಾಧನಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಒಂದು ಡಿವೈಸ್ ಎಂದರೆ ತಪ್ಪಾಗಲಿಕ್ಕಿಲ್ಲ. ಈಗಂತೂ ವರ್ಕ್ ಫ್ರಮ್ ಹೋಮ್ಗಳ ಸಂಖ್ಯೆ ಹೆಚ್ಚಿರೋದ್ರಿಂದ ಮನೆಯಲ್ಲೊಂದು ಲ್ಯಾಪ್ಟಾಪ್ಗಳನ್ನ ಕಾಣಬಹುದಾಗಿದೆ.
ಲ್ಯಾಪ್ಟಾಪ್ಗಳು ಬಹುಕಾಲದವರೆಗೆ ಬಳಕೆ ಮಾಡಬಹುದಾದ ಒಂದು ಎಲೆಕ್ಟ್ರಿಕ್ ಸಾಧನವಾಗಿದೆ. ಆದರೆ ಯಾವ ಸಾಧನವೂ ಶಾಶ್ವತವಲ್ಲ. ಲ್ಯಾಪ್ಟಾಪ್ ಇನ್ನೇನು ಸಂಪೂರ್ಣವಾಗಿ ಹಾಳಾಗುತ್ತೆ ಅನ್ನೋವಾಗ ಪರದೆ ಅಸ್ಪಷ್ಟವಾಗಿ ಕಾಣುವುದು, ಪದೇ ಹ್ಯಾಂಗ್ ಆಗೋದು, ಇದ್ದಕ್ಕಿದ್ದಂತೆ ಶಟ್ಡೌನ್ ಆಗೋದು ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ. ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಲು ಶುರುವಾದ ಬಳಿಕ ಹೊಸ ಲ್ಯಾಪ್ಟಾಪ್ ಖರೀದಿ ಮಾಡುವ ಸಮಯ ಬಂದಿದೆ ಎಂದು ಅರ್ಥ ಮಾಡಿಕೊಳ್ಳಲಿಕ್ಕೆ ಅಡ್ಡಿಯಿಲ್ಲ.
ಸ್ಮಾರ್ಟ್ ಶಾಪಿಂಗ್ ಮಾಡಿ ಹಣ ಉಳಿಸಿ
ಆದರೆ ಕೆಲವರಿಗೆ ತಮ್ಮ ಅತ್ಯಂತ ಪ್ರೀತಿಯ ಸಾಧನವನ್ನ ಬಿಟ್ಟಿರೋದು ಸುಲಭದ ಮಾತಾಗಿರಲ್ಲ. ಅದೇ ರೀತಿ ಟಿಕ್ಟಾಕ್ ಬಳಕೆದಾರ ಝೇನ್ ಕೂಡ ಲ್ಯಾಪ್ಟಾಪ್ ಮೇಲಿನ ತಮ್ಮ ಪ್ರೀತಿ ಎಂತಾದ್ದು ಅನ್ನೋದನ್ನ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ತಮ್ಮ ಪ್ರೀತಿಯ ಲ್ಯಾಪ್ಟಾಪ್ ಅಂತ್ಯಕ್ರಿಯೆ ಮಾಡುವ ಬಗ್ಗೆ ಮಾತನಾಡುತ್ತಿರೋ ವಿಡಿಯೋವನ್ನ ಝೇನ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ .
ಈ ಬೆಕ್ಕಿನ ಚಾಣಾಕ್ಷತನ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ..!
ತನ್ನ ಹಾಳಾದ ಲ್ಯಾಪ್ಟಾಪ್ನ ಸಮೇತ ಅಂತ್ಯಕ್ರಿಯೆಗೆ ನೋಂದಣಿ ಮಾಡುವ ಕಚೇರಿಗೆ ಭೇಟಿ ನೀಡಿದ ಟಿಕ್ಟಾಕರ್ ಕಚೇರಿಯಲ್ಲಿದ್ದ ಮಹಿಳೆಯ ಜೊತೆ ಮಾತನಾಡಿದ್ದಾನೆ.
ಮಹಿಳೆಯು ಟಿಕ್ಟಾಕರ್ ಬಳಿ ಅವರು ಆಗಲೇ ಸತ್ತು ಹೋದರಾ ಎಂದು ಕೇಳುತ್ತಾಳೆ. ಅಲ್ಲದೇ ಶವ ಎಲ್ಲಿದೆ ಎಂದು ಮಹಿಳೆ ಪ್ರಶ್ನೆ ಮಾಡುತ್ತಾಳೆ.
ಇದಕ್ಕೆ ಉತ್ತರಿಸಿದ ಟಿಕ್ಟಾಕರ್, ನನ್ನ ಲ್ಯಾಪ್ಟಾಪ್ ಸತ್ತು ಹೋಗಿದೆ ಎಂದು ಹೇಳುತ್ತಾನೆ. ಈ ವಿಡಿಯೋ ಎಷ್ಟರ ಮಟ್ಟಿಗೆ ವೈರಲ್ ಆಗಿದೆ ಅಂದರೆ 2 ಮಿಲಿಯನ್ಗೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.