alex Certify ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ದ ದಯಾಬೆನ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಕಿ: ನೆಟ್ಟಿಗರಿಂದ ಪ್ರಶಂಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ದ ದಯಾಬೆನ್ ಪಾತ್ರದಲ್ಲಿ ಕಾಣಿಸಿಕೊಂಡ ಬಾಲಕಿ: ನೆಟ್ಟಿಗರಿಂದ ಪ್ರಶಂಸೆ

ನೀವು ಭಾರತದ ಜನಪ್ರಿಯ ಟೆಲಿವಿಷನ್ ಶೋ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ನ ಅನುಯಾಯಿಯಾಗಿದ್ದರೆ, ದಯಾಬೆನ್ ಪಾತ್ರದ ಮೂಲಕ ಅಭಿಮಾನಿಗಳ ರಂಜಿಸಿದ ನಟಿ ದಿಶಾ ವಾಕನಿ ನಿಮಗೆ ಪರಿಚಯವಿರಬಹುದು.

ಇದೀಗ ಚಿಕ್ಕ ಹುಡುಗಿಯೊಬ್ಬಳು ದಯಾಬೆನ್ ಪಾತ್ರವನ್ನು ಬಹುತೇಕ ಸಂಪೂರ್ಣವಾಗಿ ನಕಲು ಮಾಡಿದ್ದಾಳೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ದಿಶಾ ವಾಕನಿ ಹಂಚಿಕೊಂಡಿದ್ದಾರೆ.

‘ಮಹಿಳಾ ಸಿಬ್ಬಂದಿ ಸಂಖ್ಯೆ ಹೆಚ್ಚಾದಷ್ಟೂ ಜಗಳಗಳು ಹೆಚ್ಚು’: ವಿವಾದಾತ್ಮಕ ಹೇಳಿಕೆ ನೀಡಿದ ಶಿಕ್ಷಣ ಸಚಿವ

ತಾರಕ್ ಮೆಹ್ತಾ ಕಾರ್ಯಕ್ರಮವು ದೂರದರ್ಶನದಲ್ಲಿ ಎಪಿಸೋಡ್ ಎಣಿಕೆಯ ಪ್ರಕಾರ ಅತಿ ಹೆಚ್ಚು ಕಾಲ ಪ್ರದರ್ಶನಗೊಂಡ ಗಿನ್ನಿಸ್ ವಿಶ್ವದಾಖಲೆಯನ್ನು ಹೊಂದಿದೆ. ದಯಾಬೆನ್ ಪಾತ್ರಧಾರಿ ವಾಕನಿ ಸ್ವಲ್ಪ ಸಮಯಯದವರೆಗೆ ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಕಾರ್ಯಕ್ರಮದ ಅಭಿಮಾನಿಗಳು ಆಕೆಯ ಅನುಪಸ್ಥಿತಿಯನ್ನು ನಿಜವಾಗಿಯೂ ಅನುಭವಿಸಬಹುದು. ಆದರೆ ಈಗ, ನಟಿ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಮನಸೂರೆಗೊಂಡಿದೆ.

ವರ್ಣರಂಜಿತ ಸೀರೆಯುಟ್ಟು, ದಯಾಬೆನ್ ನಂತೆ ಬಾಲಕಿಯು ಕಾರ್ಯಕ್ರಮದ ಅತ್ಯಂತ ಜನಪ್ರಿಯ ದೃಶ್ಯಗಳಲ್ಲಿ ಒಂದನ್ನು ಮರುಸೃಷ್ಟಿಸಿದ್ದಾಳೆ. ಈ ಕಿರು ಕ್ಲಿಪ್ ಈಗ 25,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಹುಡುಗಿಯ ಹೆಸರನ್ನು ಸುಮನ್ ಪುರಿ ಎಂದು ನಟಿ ಹೇಳಿದ್ದಾರೆ.

ಕಾಮೆಂಟ್ಸ್ ವಿಭಾಗದಲ್ಲಿ, ವಕನಿಯ ಅನುಯಾಯಿಗಳು ಚಿಕ್ಕ ಹುಡುಗಿಯ ನಟನಾ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ. ಆದರೆ, ಆಕೆಯ ಹೆಚ್ಚಿನ ಅಭಿಮಾನಿಗಳು ಆಕೆಯನ್ನು ಬೇಗನೆ ಕಾರ್ಯಕ್ರಮಕ್ಕೆ ಮರಳುವಂತೆ ವಿನಂತಿಸಿದ್ದಾರೆ.

“ದಯ ಮಾಮ್, ದಯವಿಟ್ಟು ಕಾರ್ಯಕ್ರಮಕ್ಕೆ ಹಿಂತಿರುಗಿ. ನಿಮ್ಮಂತೆ ಯಾರೂ ವರ್ತಿಸಲು ಸಾಧ್ಯವಿಲ್ಲ. ದಯವಿಟ್ಟು ಹಿಂತಿರುಗಿ.. ನಮಗೆ ನೀವು ಬೇಕು” ಎಂದು ಒಬ್ಬ ಬಳಕೆದಾರರು ಬರೆದಿದ್ದರೆ, ಮತ್ತೊಬ್ಬರು, “ಪ್ರಿಯ ಅಮ್ಮ, ನಿಮ್ಮನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

https://www.instagram.com/p/CU3-576DFjk/?utm_source=ig_embed&ig_rid=d481789b-a494-4ee5-bd95-5d027c04640e

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...