alex Certify ಸಿಂಹದ ವಿಡಿಯೋ ಮಾಡಲು ಹೋದಾಗ ಆಗಿದ್ದೇನು ಗೊತ್ತಾ ? ನಗು ತರಿಸುತ್ತೆ ಈ ದೃಶ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಂಹದ ವಿಡಿಯೋ ಮಾಡಲು ಹೋದಾಗ ಆಗಿದ್ದೇನು ಗೊತ್ತಾ ? ನಗು ತರಿಸುತ್ತೆ ಈ ದೃಶ್ಯ

ತ್ರಿಪುರಾ: ಸೆಲೆಬ್ರಿಟಿಗಳು, ಕ್ರೀಡಾ ಪಟುಗಳು ಮಾತ್ರವಲ್ಲದೇ ಪ್ರಾಣಿ-ಪಕ್ಷಿಗಳನ್ನು ಕಂಡಾಗ ಫೋಟೋ ತೆಗೆಯುವುದು, ವಿಡಿಯೋ ಮಾಡುವುದು ಹಾಗೂ ಸೆಲ್ಫೀಗಾಗಿ ಮುಗಿಬೀಳುವವರು ಬಹಳ ಮಂದಿ. ಅದೇ ರೀತಿ ಮೃಗಾಲಯದಲ್ಲಿದ್ದ ಸಿಂಹದ ವಿಡಿಯೋ ಮಾಡಲು ಹೋದ ಪ್ರವಾಸಿಗನಿಗೆ ಸಿಂಹ ಮಾಡಿದ್ದೇನು ಎಂದು ನೋಡಿದರೆ ಬಿದ್ದೂ ಬಿದ್ದೂ ನಗುವಲ್ಲಿ ಎರಡು ಮಾತಿಲ್ಲ.

ಮೃಗಾಲಯ, ರಾಷ್ಟ್ರೀಯ ಉದ್ಯಾನವನ ಅಥವಾ ಸಫಾರಿಯಲ್ಲಿ ಜನರು ಚಿತ್ರಗಳನ್ನು ತೆಗೆಯುವುದು ಮತ್ತು ವಿಡಿಯೋ ಮಾಡುವುದು ಸಾಮಾನ್ಯವಾಗಿದೆ. ಇದೇ ರೀತಿ ಬಂದವರೆಲ್ಲಾ ವಿಡಿಯೋ ಮಾಡುತ್ತಿದ್ದರಿಂದಲೋ ಏನೋ ಇಲ್ಲಿದ್ದ ಒಂದು ಸಿಂಹಕ್ಕೆ ಕಿರಿಕಿರಿ ಎನಿಸಿದೆ. ಆಗ ಅದು ಮಾಡಿದ್ದೇನು ಎನ್ನುವ ನಕ್ಕು ನಗಿಸುವ ವಿಡಿಯೋ ಒಂದನ್ನು ಗುಲ್ಜಾರ್ ಸಾಬ್ ಎನ್ನುವವರು ಶೇರ್​ ಮಾಡಿದ್ದಾರೆ.

ತ್ರಿಪುರಾದ ಸೆಪಾಹಿಜಾಲಾ ವನ್ಯಜೀವಿ ಅಭಯಾರಣ್ಯದಲ್ಲಿ ಇದು ನಡೆದಿದೆ. ಪ್ರವಾಸಿಗನೊಬ್ಬ ಸಿಂಹದ ವಿಡಿಯೋ ಮಾಡುತ್ತಿದ್ದ. ಅದು ಅಲ್ಲಲ್ಲೇ ತಿರುಗು ಹಾಕುತ್ತಿತ್ತು. ಈ ವಿಡಿಯೋ ಮಾಡುತ್ತಿದ್ದವನ ನೋಡಿ ಏನು ಎನ್ನಿಸಿತೋ ಗೊತ್ತಿಲ್ಲ. ಕೂಡಲೇ ಆತನ ಕಡೆ ತನ್ನ ಹಿಂಬದಿ ಹಾಕಿ ಜೊಳ್​ ಎಂದು ಮೂತ್ರ ಮಾಡಿದೆ ! ಈ ಮೂತ್ರ ಸೀದಾ ವಿಡಿಯೋ ಮಾಡುತ್ತಿದ್ದ ಪ್ರವಾಸಿಗನಿಗೆ ಹೋಗಿ ಬಡಿದಿದ್ದು, ಆತ ಹಾಗೂ ಆತನ ಪತ್ನಿ ಥಟ್ಟನೆ ಚೀರಿಕೊಂಡಿರುವುದು ವಿಡಿಯೋದಲ್ಲಿ ಕೇಳುತ್ತದೆ.

ವಿಡಿಯೋವನ್ನು ಇದಾಗಲೇ ಲಕ್ಷ ಲಕ್ಷ ಮಂದಿ ವೀಕ್ಷಿಸಿದ್ದು, ಥರಹೇವಾರಿ ಕಮೆಂಟ್​ ಹಾಕುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...