alex Certify ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಎರಡು ಕುರ್ಚಿಗಳ ಮೇಲೆ ಸರ್ಕಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ.

ಹುಡುಗಿ ಮೊದಲ ಕುರ್ಚಿಯನ್ನು ಏರುತ್ತಾಳೆ ಮತ್ತು ಕುರ್ಚಿಯ ಹಿಂಭಾಗದ ಮೇಲ್ಭಾಗದಲ್ಲಿ ತನ್ನ ಪಾದವನ್ನು ಹಾಕುತ್ತಾಳೆ. ಅವಳು ಮೊದಲು ಸಮತೋಲನದಲ್ಲಿಯೇ ಇರುತ್ತಾಳೆ.

ಬ್ಯಾಲೆನ್ಸ್​ ಮಾಡುತ್ತಾ ಮುಂದಿನ ಕುರ್ಚಿಯ ಆಸನದ ಮೇಲೆ ಇಳಿಯುತ್ತಾಳೆ. ಇದು ಎಲ್ಲಾ ಚೆನ್ನಾಗಿಯೇ ಕಾಣುತ್ತದೆ. ಈಗ ಆಕೆಯ ಸರ್ಕಸ್​ ಮುಂದುವರೆಯುತ್ತದೆ. ಎರಡನೇ ಕುರ್ಚಿಯಿಂದ ನೆಲದ ಮೇಲೆ ಪರಿಪೂರ್ಣವಾದ ಲ್ಯಾಂಡಿಂಗ್ ಮಾಡಲು ಹೋಗುತ್ತಾಳೆ.

ಎಡವಟ್ಟು ಆಗುವುದು ಅಲ್ಲಿಯೇ. ಆಕೆ ಸಮತೋಲನ ಕಳೆದುಕೊಂಡು ಕುರ್ಚಿಯ ಹಿಂಭಾಗದಿಂದ ಜಾರಿ ಬೀಳುತ್ತಾಳೆ. ಅಲ್ಲಿರುವ ಪೀಠೋಪಕರಣಗಳ ಮೇಲೆ ಬೀಳುತ್ತಾಳೆ. ಇದರ ವಿಡಿಯೋ ವೈರಲ್​ ಆಗಿದ್ದು, ಹುಚ್ಚುಹುಚ್ಚಾಗಿ ಸಾಹಸ ಮಾಡಲು ಹೋಗಿ ಜೀವ ಕಳೆದುಕೊಳ್ಳಬೇಡಿ ಎಂದು ಹಲವು ಬಳಕೆದಾರರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...