alex Certify ಇಂಟರ್ನೆಟ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದ ಪಾಕ್​ನ ಈ ನೀಲಿ ಕಂಗಳ ಚೆಲುವ ಈಗೇನ್ಮಾಡ್ತಿದ್ದಾರೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿದ್ದ ಪಾಕ್​ನ ಈ ನೀಲಿ ಕಂಗಳ ಚೆಲುವ ಈಗೇನ್ಮಾಡ್ತಿದ್ದಾರೆ ಗೊತ್ತಾ….?

2016ರಲ್ಲಿ ನೀಲಿ ಕಂಗಳ ಚಹಾ ವ್ಯಾಪಾರಿಯ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪಾಕಿಸ್ತಾನದ ಈ ಯುವಕ ತಮ್ಮ ಆಕರ್ಷಕ ಕಣ್ಣುಗಳ ಮೂಲಕ ಭಾರೀ ಸುದ್ದಿಯಲ್ಲಿದ್ದರು. ಜಿಯಾ ಅಲಿ ಎಂಬ ಫೋಟೋಗ್ರಾಫರ್​ ಈ ವ್ಯಕ್ತಿಯ ಫೋಟೋ ಕ್ಲಿಕ್ಕಿಸಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ಫೋಟೋ ಚಹಾ ಮಾರಾಟಗಾರನಿಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು.
ಅಂದಹಾಗೆ ಈ ಚಾಯ್​ವಾಲಾ ಹೆಸರು ಅರ್ಷದ್​ ಖಾನ್​ ಎಂದಾಗಿದ್ದು ಇತ್ತೀಚಿಗೆ ಅವರು ಲಂಡನ್​​ನಲ್ಲಿ ಸ್ವಂತ ಕೆಫೆಯನ್ನು ತೆರೆಯುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹೌದು.. ! ಅಂದು ತಮ್ಮ ಆಕರ್ಷಕ ಕಣ್ಣಿನಿಂದ ಸೆನ್ಸೇಷನ್​​​ ಸೃಷ್ಟಿಸಿದ್ದ ಅರ್ಷದ್​ ಖಾನ್​ ಪೂರ್ವ ಲಂಡನ್​​​ನ ಇಲ್ಫೋರ್ಡ್​ ಲೇನ್​​ನಲ್ಲಿ ಕೆಫೆ ಚಾಯವಾಲಾವನ್ನು ತೆರೆದಿದ್ದಾರೆ. ಪೂರ್ವ ಲಂಡನ್​​ನಲ್ಲಿ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಈ ಕೆಫೆಯನ್ನು ನೋಡಿದಾಕ್ಷಣ ಇದು ದಕ್ಷಿಣ ಏಷ್ಯಾ ಭಾಗದ ಯಾವುದೋ ಮಾಲೀಕರಿಗೆ ಸೇರಿದ್ದು ಎಂದು ಸುಲಭದಲ್ಲಿ ಹೇಳುವಂತೆ ವಿನ್ಯಾಸಗೊಳಿಸಲಾಗಿದೆ. ಗೋಡೆಗಳಲ್ಲಿ ದೇಸಿ ವರ್ಣಚಿತ್ರಗಳನ್ನು ಬಿಡಿಸಲಾಗಿದೆ.

ಕೆಫೆಯ ಬಗ್ಗೆ ಮಾತನಾಡಿದ ನೀಲಿ ಕಂಗಳ ಚೆಲುವ ಅರ್ಷದ್ ಖಾನ್​. ಲಂಡನ್​ಗೆ ನಾನು ಭೇಟಿ ನೀಡಿದ್ದಾಗ ಅನೇಕರು ನನಗೆ ಕೆಫೆ ತೆರೆಯುವಂತೆ ಕೇಳಿಕೊಂಡರು. ಅಂತೆಯೇ ನನ್ನ ಮೊದಲ ಅಂತಾರಾಷ್ಟ್ರೀಯ ಚಹಾ ಕೆಫೆಯು ಇಲ್ಬೋರ್ಡ್​ ಲೇನ್​ನಲ್ಲಿ ತೆರೆಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇಲ್ಲಿ ಪಾಕಿಸ್ತಾನ ಹಾಗೂ ಭಾರತೀಯರೇ ಹೆಚ್ಚಾಗಿ ಇರೋದ್ರಿಂದ ಖಂಡಿತವಾಗಿ ಇಲ್ಲಿ ಚಹಪ್ರಿಯರ ಸಂಖ್ಯೆ ಕೂಡ ಜಾಸ್ತಿ ಇರುತ್ತೆ. ಇದೇ ಕಾರಣಕ್ಕೆ ನಾವು ಈ ಸ್ಥಳವನ್ನು ನಮ್ಮ ಕೆಫೆ ನಿರ್ಮಾಣಕ್ಕೆ ಆಯ್ಕೆ ಮಾಡಿಕೊಂಡಿದ್ದೆವು ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...