alex Certify ಕಮಲ್‌ ಅಭಿನಯದ ‌ʼವಿಕ್ರಮ್ʼ ನಿಂದ ಬಾಹುಬಲಿ ದಾಖಲೆ ಉಡೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಮಲ್‌ ಅಭಿನಯದ ‌ʼವಿಕ್ರಮ್ʼ ನಿಂದ ಬಾಹುಬಲಿ ದಾಖಲೆ ಉಡೀಸ್

ವಿಕ್ರಮ್ ಚಿತ್ರ ಹಲವು ದಾಖಲೆಗಳನ್ನು ಮುರಿದಿದ್ದು, ನಟ ಕಮಲ್ ಹಾಸನ್ ಸಂಭ್ರಮಿಸಿದ್ದಾರೆ. ಚಿತ್ರವು ವಿಶ್ವದಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದ್ದು, ಈಗ ತಮಿಳುನಾಡಿನಲ್ಲಿ ಬಾಹುಬಲಿ- 2 ರ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಯನ್ನು ಸಹ ಮುರಿದಿದೆ. 2017 ರಲ್ಲಿ ಬಿಡುಗಡೆಯಾದ ಬಾಹುಬಲಿ- 2 ತಮಿಳುನಾಡಿನಲ್ಲಿ 146 ಕೋಟಿ ಗಳಿಸಿತ್ತು.

ತಮಿಳುನಾಡಲ್ಲಿ ಎರಡು ವಾರಗಳಲ್ಲಿ ವಿಕ್ರಮ್ ಚಿತ್ರವು 150 ಕೋಟಿ ರೂ. ಗಳಿಸಿದ್ದು, ಚಿತ್ರದ ಸಕ್ಸಸ್ ಮೀಟ್ ಆಯೋಜನೆಗೊಂಡಿತ್ತು. ಕಮಲ್ ಹಾಸನ್, ನಿರ್ದೇಶಕ ಲೋಕೇಶ್ ಕನಕರಾಜ್, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಸಹನಟ ವಿಜಯ್ ಸೇತುಪತಿ ಯಶಸ್ಸಿನ ಪಾರ್ಟಿಯಲ್ಲಿ ಪಾಲ್ಗೊಂಡು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು.

ವಿಕ್ರಮ್ ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ ಹೈ- ಆಕ್ಟೇನ್ ಆಕ್ಷನ್ ಎಂಟರ್‌ಟೈನರ್. ಈ ಚಿತ್ರದಲ್ಲಿ ಕಮಲ್ ಹಾಸನ್, ಫಹಾದ್ ಫಾಸಿಲ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ರೋಲೆಕ್ಸ್ ಪಾತ್ರದಲ್ಲಿ ಸೂರ್ಯ ನಟಿಸಿದ್ದಾರೆ. ಅವರ ಐದು ನಿಮಿಷಗಳ ಪಾತ್ರವು ಚಿತ್ರದ ಹೈಲೈಟ್‌ಗಳಲ್ಲಿ ಒಂದಾಗಿದೆ. ಕಾಳಿದಾಸ್ ಜಯರಾಮ್, ನರೇನ್, ವಸಂತಿ, ಗಾಯತ್ರಿ ಮತ್ತು ಸಂತಾನ ಭಾರತಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

— Raaj Kamal Films International (@RKFI) June 18, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...