alex Certify ವಿಜಯಪುರದಲ್ಲಿ `ಡಬಲ್ ಮರ್ಡರ್’ : ಹೆಂಡತಿ, ಅತ್ತೆಯನ್ನು ಬರ್ಬರವಾಗಿ ಹತ್ಯೆಗೈದ ಗಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಜಯಪುರದಲ್ಲಿ `ಡಬಲ್ ಮರ್ಡರ್’ : ಹೆಂಡತಿ, ಅತ್ತೆಯನ್ನು ಬರ್ಬರವಾಗಿ ಹತ್ಯೆಗೈದ ಗಂಡ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಡಬಲ್ ಮರ್ಡರ್ ಪ್ರಕರಣ ನಡೆದಿದ್ದು, ಹೆಂಡತಿ ಮತ್ತು ಅತ್ತೆಯನ್ನು ಕೊಂದು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.

ವಿಜಯಪುರ ನಗರದ ನವಭಾಗ್ ಪ್ರದೇಶದಲ್ಲಿ ಕೌಟುಂಬಿಕ ಕಲಹ ಹಿನ್ನೆಲೆ ಕಟ್ಟಿಗೆಯಿಂದ ಹೊಡೆದು ಅತ್ತೆ ಮತ್ತು ಪತ್ನಿಯನ್ನು ಪತಿ ಹತ್ಯೆ  ಮಾಡಿರುವಂತಹ ಘಟನೆ ನಡೆದಿದೆ. ಪತ್ನಿ ರೂಪಾ(32), ಅತ್ತೆ ಕಲ್ಲವ್ವ(55) ಮೃತರು. ಮಲ್ಲಿಕಾರ್ಜುನ ಹತ್ಯೆಗೈದ ವ್ಯಕ್ತಿ.

ನವಭಾಗ್​ನಲ್ಲಿ ಬಾಡಿಗೆ ಮನೆಯಲ್ಲಿ ಅತ್ತೆ, ಮೂವರು ಮಕ್ಕಳು, ಪತ್ನಿ ಜೊತೆ ಮಲ್ಲಿಕಾರ್ಜುನ ಮೇತ್ರಿ ವಾಸವಿದ್ದ. ಹೆಂಡತಿ ಮತ್ತು ಅತ್ತೆಯನ್ನು ಹತ್ಯೆ ಮಾಡಿ ಗಾಂಧಿಚೌಕ್​ ಠಾಣೆಗೆ ಬಂದು ಮಲ್ಲಿಕಾರ್ಜುನ ಶರಣಾಗಿದ್ದಾನೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿರುವ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...