alex Certify BIG NEWS: ಡಿಡಿಪಿಐ ಸೇರಿ ಮೂವರು ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಡಿಡಿಪಿಐ ಸೇರಿ ಮೂವರು ಸಸ್ಪೆಂಡ್

ವಿಜಯಪುರ: ಕರ್ತವ್ಯ ಲೋಪ ಆರೋಪದಲ್ಲಿ ವಿಜಯಪುರ ಡಿಡಿಪಿಐ ಹಾಗೂ ವಿಜಯಪುರ ಡಯಟ್ ನ ಹಿರಿಯ ಉಪನ್ಯಾಸಕರಿಬ್ಬರು ಸೇರಿ ಮೂವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಐಇಡಿಎಸ್ ಎಸ್ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಸಾರ್ವಜನಿಕ ಸಿಕ್ಷಣ ಇಲಾಖೆಯ ವಿಚಾರಣೆ ಕಾಯ್ದಿರಿಸಿ ವಿಜಯಪುರ ಡಿಡಿಪಿಐ ಎನ್. ಹೆಚ್. ನಗೂರು ಹಾಗೂ ವಿಜಯಪುರ ಡಯಟ್ ಹಿರಿಯ ಉಪನ್ಯಾಸಕ ಎಸ್ ಎ ಮುಜಾವರ, ಎ ಎಸ್ ಹತ್ತಳ್ಳಿ ಅವರನ್ನು ಅಮಾನತು ಮಾಡಲಾಗಿದೆ.

2009-10 ಹಾಗೂ 2011-12 ರಲ್ಲಿ ಐಇಡಿಎಸ್ ಎಸ್ ಯೋಜನೆ ಅನುದಾನ ದುರುಪಯೋಗ ಮಾಡಿಕೊಂಡಿರುವ ಹಾಗೂ ನಿಯಮ ಬಾಹಿರವಾಗಿ ಅಸ್ತಿತ್ವದಲ್ಲಿಯೇ ಇರದ ಎನ್ ಜಿಒ ಗಳಿಗೆ ಹಣ ಬಿಡುಗಡೆ ಮಾಡಿದ ಆರೋಪವೂ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ ಮಲ್ಲಿಕಾರ್ಜುನ ರಾಮಚಂದ್ರಪ್ಪ ಅಮಾನತು ಆದೇಶ ಹೊರಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...