alex Certify BREAKING: ವಿಜಯ್​​ ಮಲ್ಯರನ್ನ ದಿವಾಳಿ ಎಂದು ಘೋಷಿಸಿದ ಯುಕೆ ನ್ಯಾಯಾಲಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ವಿಜಯ್​​ ಮಲ್ಯರನ್ನ ದಿವಾಳಿ ಎಂದು ಘೋಷಿಸಿದ ಯುಕೆ ನ್ಯಾಯಾಲಯ…..!

ಬ್ಯಾಂಕ್​ ಸಾಲ ತೀರಿಸದೇ ಭಾರತದಿಂದ ಕಾಲ್ಕಿತ್ತಿದ್ದ ಉದ್ಯಮಿ ವಿಜಯ್​ ಮಲ್ಯರನ್ನ ಬ್ರಿಟನ್​ ಹೈಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಈ ಮೂಲಕ ಸ್ಟೇಟ್​ ಬ್ಯಾಂಕ್​ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್​ ಒಕ್ಕೂಟವು ಸಾಲ ಮರುಪಾವತಿ ಮಾಡಿಕೊಳ್ಳಲು ವಿಶ್ವದಾದ್ಯಂತ ವಿಜಯ್​ ಮಲ್ಯರ ಆಸ್ತಿಯನ್ನ ಮುಟ್ಟುಗೋಲು ಹಾಕಲು ಮುಂದಡಿ ಇಡಬಹುದಾಗಿದೆ.

ಯುಕೆ ಕಾಲಮಾನ 3 ಗಂಟೆ 45 ನಿಮಿಷದ ವೇಳೆಯಲ್ಲಿ ತೀರ್ಪು ನೀಡಿದ ಯುಕೆ ನ್ಯಾಯಮೂರ್ತಿ ಮೈಕಲ್​​ ಬ್ರಿಗ್ಸ್​​ ವಿಜಯ್​ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ವಿಜಯ್​ ಮಲ್ಯ ತಮ್ಮ ಮೇಲೆ ಇರುವ ಸಾಲದ ಹೊರೆಯನ್ನ ಇಳಿಸಿಕೊಳ್ಳಲು ಶಕ್ತರಿದ್ದಾರೆ ಅನ್ನೋದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...