ಬ್ಯಾಂಕ್ ಸಾಲ ತೀರಿಸದೇ ಭಾರತದಿಂದ ಕಾಲ್ಕಿತ್ತಿದ್ದ ಉದ್ಯಮಿ ವಿಜಯ್ ಮಲ್ಯರನ್ನ ಬ್ರಿಟನ್ ಹೈಕೋರ್ಟ್ ದಿವಾಳಿ ಎಂದು ಘೋಷಿಸಿದೆ. ಈ ಮೂಲಕ ಸ್ಟೇಟ್ ಬ್ಯಾಂಕ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕ್ ಒಕ್ಕೂಟವು ಸಾಲ ಮರುಪಾವತಿ ಮಾಡಿಕೊಳ್ಳಲು ವಿಶ್ವದಾದ್ಯಂತ ವಿಜಯ್ ಮಲ್ಯರ ಆಸ್ತಿಯನ್ನ ಮುಟ್ಟುಗೋಲು ಹಾಕಲು ಮುಂದಡಿ ಇಡಬಹುದಾಗಿದೆ.
ಯುಕೆ ಕಾಲಮಾನ 3 ಗಂಟೆ 45 ನಿಮಿಷದ ವೇಳೆಯಲ್ಲಿ ತೀರ್ಪು ನೀಡಿದ ಯುಕೆ ನ್ಯಾಯಮೂರ್ತಿ ಮೈಕಲ್ ಬ್ರಿಗ್ಸ್ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಅಲ್ಲದೇ ವಿಜಯ್ ಮಲ್ಯ ತಮ್ಮ ಮೇಲೆ ಇರುವ ಸಾಲದ ಹೊರೆಯನ್ನ ಇಳಿಸಿಕೊಳ್ಳಲು ಶಕ್ತರಿದ್ದಾರೆ ಅನ್ನೋದಕ್ಕೆ ಯಾವುದೇ ಆಧಾರವಿಲ್ಲ ಎಂದೂ ಅವರು ಹೇಳಿದ್ದಾರೆ.