alex Certify Video | ಕಳ್ಳರ ಕಾಟದಿಂದ ಬೇಸತ್ತು ಈ ಸ್ಟೋರ್‌ ಮಾಲೀಕರು ಮಾಡಿದ್ದಾರೆ ಸಖತ್‌ ಐಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಕಳ್ಳರ ಕಾಟದಿಂದ ಬೇಸತ್ತು ಈ ಸ್ಟೋರ್‌ ಮಾಲೀಕರು ಮಾಡಿದ್ದಾರೆ ಸಖತ್‌ ಐಡಿಯಾ

ಶಾಪ್‌ ಲಿಫ್ಟಿಂಗ್ (ಅಂಗಡಿಯಲ್ಲಿ ಕಳ್ಳತನ ಮಾಡುವುದು) ತಪ್ಪಿಸಲೆಂದು ಟಾರ್ಗೆಟ್ ಸ್ಟೋರ್‌ ಒಂದರ ಮಾಳಿಗೆಯಲ್ಲಿ ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳನ್ನು ಗಾಜಿನ ಕಂಪಾರ್ಟ್ಮೆಂಟ್‌ ಒಂದರಲ್ಲಿ ಇಡಲಾದ ವಿಡಿಯೋವೊಂದು ವೈರಲ್ ಆಗಿದೆ.

ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಈ ಮಾಳಿಗೆಯಲ್ಲಿ ರೆಕಾರ್ಡ್ ಮಾಡಲಾದ ಈ ವಿಡಿಯೋವನ್ನು ಟಿಕ್‌ಟಾಕ್‌ನಲ್ಲಿ ಮೊದಲಿಗೆ ಶೇರ್‌ ಮಾಡಲಾಗಿತ್ತು. ದಿನೇ ದಿನೇ ಕಳ್ಳತನದ ಪ್ರಕರಣಗಳು ಜೋರಾಗುತ್ತಿರುವ ಕಾರಣ ಟಾರ್ಗೆಟ್ ಸ್ಟೋರ್‌ ಈ ಕ್ರಮಕ್ಕೆ ಮುಂದಾಗಿದೆ.

ಟೂತ್‌ಪೇಸ್ಟ್‌, ಡಿಯೋಡ್ರಂಟ್, ಲೋಷನ್ ಹಾಗೂ ರೇಜ಼ರ್‌ಗಳನ್ನು ಹೀಗೆ ಗಾಜಿನ ಕ್ಯಾಬಿನ್‌ನಲ್ಲಿಟ್ಟು ಲಾಕ್ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...