
ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ನಾಯಿಯೊಂದು ನೀರು ಕುಡಿಯಲು ತನ್ನ ಬಾಯಿಯಿಂದ ಟ್ಯಾಪ್ ಅನ್ನು ತೆರೆದಿದೆ. ತನ್ನ ಬಾಯಾರಿಕೆಯನ್ನು ನೀಗಿಸಿದ ನಂತರ, ನಾಯಿಯು ಟ್ಯಾಪ್ ಅನ್ನು ಆಫ್ ಮಾಡುತ್ತದೆ.
ಪ್ರತಿ ಹನಿಯೂ ಅಮೂಲ್ಯ. ನಾಯಿಗೂ ಅರ್ಥವಾಗಿದೆ. ಆದರೆ, ಇದು ಮನುಷ್ಯರಾದ ನಮಗೆ ಯಾವಾಗ ಅರ್ಥವಾಗುತ್ತದೆ ಎಂದು ವಿಡಿಯೋ ಹಂಚಿಕೊಳ್ಳುತ್ತಾ, ಅಧಿಕಾರಿ ಈ ರೀತಿ ಶೀರ್ಷಿಕೆ ನೀಡಿದ್ದಾರೆ.
ಈ ವಿಡಿಯೋ 34 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಶ್ವಾನದ ಜವಾಬ್ದಾರಿಯುತ ನಡೆಗೆ ನೆಟ್ಟಿಗರು ಪ್ರಭಾವಿತರಾಗಿದ್ದಾರೆ. ನೀರನ್ನು ಹೇಗೆ ಸಂರಕ್ಷಿಸಬೇಕು ಎಂಬುದನ್ನು ಈ ಶ್ವಾನದಿಂದ ನೋಡಿ ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ.