alex Certify ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕಟ್ಟಡ; ಭೂಕಂಪದ ಭಯಾನಕ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೋಡನೋಡುತ್ತಿದ್ದಂತೆ ಕುಸಿದುಬಿತ್ತು ಕಟ್ಟಡ; ಭೂಕಂಪದ ಭಯಾನಕ ವಿಡಿಯೋ ವೈರಲ್​

ಟರ್ಕಿಯಲ್ಲಿ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಬಲವಾದ ಕಂಪನದಲ್ಲಿ ಅನೇಕ ಕಟ್ಟಡಗಳು ನಾಶವಾಗಿದ್ದು, ಸಹಸ್ರಾರು ಮಂದಿ ಗಾಯಗೊಂಡಿದ್ದಾರೆ. ಇದರ ಭಯಾನಕ ಚಿತ್ರಣ ವೈರಲ್​ ಆಗಿದೆ.

ಸೈಪ್ರಸ್, ಟರ್ಕಿ, ಗ್ರೀಸ್, ಜೋರ್ಡಾನ್, ಲೆಬನಾನ್, ಸಿರಿಯಾ, ಯುಕೆ, ಇರಾಕ್ ಮತ್ತು ಜಾರ್ಜಿಯಾ ಸೇರಿದಂತೆ ಇತರ ಕೆಲವು ದೇಶಗಳಲ್ಲಿ ಭೂಕಂಪದ ನಂತರದ ಕಂಪನವನ್ನು ಅನುಭವಿಸಲಾಯಿತು. ಕಟ್ಟಡಗಳು ಕುಸಿಯುತ್ತಿರುವುದನ್ನು, ಮಸೀದಿಗಳು ಬೀಳುತ್ತಿರುವುದು, ಸೂಪ‌ರ್ ಮಾರ್ಕೆಟ್​ಗಳು ನಾಶವಾದುದನ್ನು ತೋರಿಸುವ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಟರ್ಕಿಯ ದಿಯಾರ್‌ಬಕಿರ್‌ನಿಂದ ಸಂಭವಿಸಿದ ಭೂಕಂಪದ ವಿಡಿಯೋವು ಕಂಪನದ ನಂತರ ಕಟ್ಟಡವು ಕುಸಿಯುತ್ತಿರುವುದನ್ನು ತೋರಿಸುತ್ತದೆ. ಎಂಟು ಸೆಕೆಂಡುಗಳ ವಿಡಿಯೋದಲ್ಲಿ ಕಟ್ಟಡವು ಕಾಂಕ್ರೀಟ್ ಮತ್ತು ಧೂಳಿನ ರಾಶಿಗೆ ಕುಸಿದಾಗ ಗುಡುಗು ಸಿಡಿಲಿನ ನಿಖರವಾದ ಕ್ಷಣವನ್ನು ಸೆರೆಹಿಡಿಯುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...