alex Certify ತನ್ನ ತಾಯಿ ಫೋಟೋದೊಂದಿಗೆ ವಿವಾಹ ವೇದಿಕೆ ಪ್ರವೇಶಿಸಿದ ವಧು: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ತಾಯಿ ಫೋಟೋದೊಂದಿಗೆ ವಿವಾಹ ವೇದಿಕೆ ಪ್ರವೇಶಿಸಿದ ವಧು: ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

Teary-eyed Pakistani bride enters wedding venue with pic of her late mother.  Heartbreaking viral video - Trending News Newsಕೈಯಲ್ಲಿ ತನ್ನ ತಾಯಿಯ ಭಾವಚಿತ್ರವನ್ನು ಹಿಡಿದುಕೊಂಡು ವಧು ತನ್ನ ವಿವಾಹದ ವೇದಿಕೆಗೆ ಪ್ರವೇಶಿಸುವ ಹೃದಯಸ್ಪರ್ಶಿ ವಿಡಿಯೋ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ.

ಪಾಕಿಸ್ತಾನದಲ್ಲಿ ನಡೆದ ಮದುವೆಯ ದೃಶ್ಯಾವಳಿಗಳು ವಧು ತನ್ನ ತಾಯಿಯ ಛಾಯಾಚಿತ್ರವನ್ನು ಹಿಡಿದುಕೊಂಡು ತಂದೆಯ ಕೈ ಹಿಡಿದು ವೇದಿಕೆಯತ್ತ ಅಳುತ್ತಾ ಪ್ರವೇಶಿಸಿದ್ದಾಳೆ. ಕೆಂಪು ಬಣ್ಣದ ಲೆಹಂಗಾ ಧರಿಸಿರುವ ವಧು ವೇದಿಕೆಯತ್ತ ಆಗಮಿಸುತ್ತಿದ್ದಂತೆ ಅಲ್ಲಿದ್ದ ಎಲ್ಲರ ಕಣ್ಣುಗಳು ಸಹ ಒದ್ದೆಯಾಗಿದೆ.

ಭಾವುಕ ಕ್ಷಣದ ವಿಡಿಯೋ ಕ್ಲಿಪ್ ಅನ್ನು ಛಾಯಾಗ್ರಾಹಕ ಮಹಾ ವಜಾಹತ್ ಖಾನ್ ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ತಾಯಿಯನ್ನು ಕಳೆದುಕೊಂಡಿರುವ ಎಲ್ಲಾ ಹೆಣ್ಣುಮಕ್ಕಳಿಗೆ ಅರ್ಪಿಸಿದ್ದಾರೆ.‌

ವಿಡಿಯೋದಲ್ಲಿ ವಧುವಿನ ಸಂಬಂಧಿಕರು ಕಣ್ಣೀರು ಒರೆಸಿಕೊಂಡು ಆಕೆಗೆ ಸಾಂತ್ವನ ಹೇಳುತ್ತಿರುವುದು ಕಂಡು ಬಂದಿದೆ. 57 ಸೆಕೆಂಡುಗಳ ವಿಡಿಯೋ ಕ್ಲಿಪ್ ನಲ್ಲಿ ವಧು ಮತ್ತು ಆಕೆಯ ತಂದೆ ತನ್ನ ವಿದಾಯಿ ಸಮಯದಲ್ಲಿ ತಬ್ಬಿಕೊಳ್ಳುವುದರೊಂದಿಗೆ ಕೊನೆಗೊಂಡಿದೆ.

ಎರಡು ದಿನಗಳ ಹಿಂದೆ ಹಂಚಿಕೊಂಡ ಈ  ವಿಡಿಯೋವನ್ನು 2.8 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಗಳಿಸಿ, ವೈರಲ್ ಆಗಿದೆ. ವಿಡಿಯೋ ನೋಡಿದ ನೆಟ್ಟಿಗರು ಕೂಡ ಭಾವುಕರಾಗಿದ್ದಾರೆ. ಕಮೆಂಟ್ ವಿಭಾಗದಲ್ಲಿ ಹಲವು ಮಂದಿ ವಧುವಿಗೆ ತಮ್ಮ ಪ್ರೀತಿ ಮತ್ತು ಶುಭಾಶಯಗಳನ್ನು ಕಳುಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...