alex Certify ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ಈ ಭಾರತೀಯ ರೈಲಿನ ಒಂದು ಟಿಕೆಟ್​ ಬೆಲೆ ಬರೋಬ್ಬರಿ 20 ಲಕ್ಷ ರೂಪಾಯಿ….!

ನವದೆಹಲಿ: ರೈಲು ಪ್ರಯಾಣಗಳು ಕೆಲವು ಆರೋಗ್ಯಕರ ಅನುಭವಗಳಿಗಿಂತ ಕಡಿಮೆಯಿಲ್ಲ. ಆದರೆ ಓ ಮೈ ಗಾಡ್​ ಎನ್ನುವ ವಿಷಯ ಇಲ್ಲಿದೆ. ಅದೇನೆಂದರೆ ಇಲ್ಲೊಂದು ಭಾರತೀಯ ರೈಲಿನಲ್ಲಿ ಒಂದು ಟಿಕೆಟ್​ಗೆ ಸುಮಾರು 20 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು!

ಇದೇನಿದು ಜೋಕಾ ಎಂದು ಕೇಳಬೇಡಿ. ಸಾಮಾನ್ಯವಾಗಿ ಜನರು ರೈಲುಗಳಿಗೆ ಹೋಗುವುದೇ ಕಡಿಮೆ ಖರ್ಚು ಎಂದು. ಹಾಗೆಂದು ದುಬಾರಿ ಕಂಪಾರ್ಟ್​ಮೆಂಟ್​ಗೂ ವಿಐಪಿಗಳು ಹೋಗುತ್ತಾರೆ. ಆದರೆ 19,90,800 ರೂಪಾಯಿಯ ಟಿಕೆಟ್​ ಎಂದರೆ ಹೌಹಾರುವುದು ಗ್ಯಾರಂಟಿ.

ಆದರೆ ಇಂಥದ್ದೊಂದು ಕಂಪಾರ್ಟ್​ಮೆಂಟ್​ ಇರುವುದು ಮಹಾರಾಜಾ ಎಕ್ಸ್‌ಪ್ರೆಸ್​ನಲ್ಲಿ. ರಾಜಮನೆತನದ ಒಳಾಂಗಣ ಇರುವ ಕಂಪಾರ್ಟ್​ಮೆಂಟ್​ ಇದಾಗಿದೆ.

ಐಷಾರಾಮಿ ಬಂಗಲೆಯಲ್ಲಿ ಇರುವ ಎಲ್ಲಾ ವ್ಯವಸ್ಥೆಗಳೂ ಈ ಕಂಪಾರ್ಟ್​ಮೆಂಟ್​ನಲ್ಲಿ ಇದೆ. 2010ರಿಂದ ಈ ರೈಲು ತಿರುಗಾಡುತ್ತಿದೆ.

ಸಾಮಾಜಿಕ ಮಾಧ್ಯಮ ಬ್ಲಾಗರ್ ಕುಶಾಗ್ರಾ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ‘ನವರತ್ನ’ ಎಂಬ ರಾಷ್ಟ್ರಪತಿ ಸೂಟ್‌ಗೆ ಸುಮಾರು 19,90,800 ರೂ. ಜೊತೆಗೆ ಜಿಎಸ್‌ಟಿ ವೆಚ್ಚವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...