alex Certify ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಎಣ್ಣೆಯೊಳಗೆ ಬಿತ್ತು ಮೊಬೈಲ್; ಆಮೇಲಾಗಿದ್ದೇನು ? ವಿಡಿಯೋ ನೋಡಿ

ಅನೇಕ ರೆಸ್ಟೋರೆಂಟ್‌ಗಳು ಅಡುಗೆ‌ ಮನೆಯಲ್ಲಿ ಕೆಲಸ ಮಾಡುವಾಗ ಉದ್ಯೋಗಿಗಳಿಗೆ ಮೊಬೈಲ್ ಫೋನ್‌ಗಳನ್ನು ಬಳಸಲು ಅನುಮತಿಸದಿರಲು ಒಂದು ಕಾರಣವಿದೆ. ಅದು ಯಾಕೆ ಎಂದು ಈ ವಿಡಿಯೋ ನೋಡಿದರೆ ಅರ್ಥವಾದೀತು.

ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಯೊಬ್ಬಳು ಹುರಿಯುತ್ತಿರುವ ಖಾದ್ಯದಲ್ಲಿ ಮೊಬೈಲ್​ ಫೋನ್​ ಬೀಳಿಸಿಕೊಂಡು ಪೇಚಿಗೆ ಸಿಲುಕಿರುವ ವಿಡಿಯೋ ಇದಾಗಿದೆ.

ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಮೆಸೇಜ್​ ಬಂದಿದೆ. ಅದನ್ನು ನೋಡಲು ಕಿಸೆಯಿಂದ ಮಹಿಳೆ ಫೋನ್​ ತೆಗೆದಿದ್ದಾಳೆ. ದುರದೃಷ್ಟವಶಾತ್, ಫೋನ್ ಕೆಳಗೆ ಜಾರಿದೆ, ನೇರವಾಗಿ ಬಿಸಿ ಎಣ್ಣೆಯೊಳಗೆ ಇಳಿಯುತ್ತದೆ.

ಮಹಿಳೆ ಸೆಲ್ ಫೋನ್ ಅನ್ನು ತೆಗೆದುಹಾಕಲು ಟಾಂಗ್ ಅನ್ನು ಬಳಸುತ್ತಾಳೆ. ಆದರೆ ಅದು ಅಷ್ಟರಲ್ಲಿಯೇ ಹಾಳಾಗಿ ಹೋಗಿದೆ ಎನ್ನುವುದು ತಿಳಿಯುತ್ತದೆ. ಈ ವಿಡಿಯೋಗೆ ತಮಾಷೆಯ ಹಲವಾರು ಕಮೆಂಟ್​ಗಳು ಬಂದಿವೆ.

— cctv ediots 📷 (@cctv_videos) March 2, 2023

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...