alex Certify ವಿದಾಯ ಭಾಷಣದ ಬಳಿಕ ಬೋರಿಸ್​ ಜಾನ್ಸನ್​ಗೆ ಚಪ್ಪಾಳೆ ತಟ್ಟಲು ಥೆರೆಸಾ ಮೇ ಹಿಂದೇಟು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದಾಯ ಭಾಷಣದ ಬಳಿಕ ಬೋರಿಸ್​ ಜಾನ್ಸನ್​ಗೆ ಚಪ್ಪಾಳೆ ತಟ್ಟಲು ಥೆರೆಸಾ ಮೇ ಹಿಂದೇಟು; ವಿಡಿಯೋ ವೈರಲ್

ಯುಕೆಯಲ್ಲಿ ನಡೆದಿರುವ ರಾಜಕೀಯ ಬೆಳವಣಿಗೆಯಲ್ಲಿ ಬೋರಿಸ್​ ಜಾನ್ಸನ್​ ಅವರು ಕನ್ಸರ್ವೇಟಿವ್​ ನಾಯಕತ್ವವನ್ನು ತೊರೆದ ವಾರಗಳ ನಂತರ ಮುಂದಿನ ಬ್ರಿಟಿಷ್​ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡುವವರೆಗೆ ಅವರು ಅಧಿಕಾರದಲ್ಲಿ ಇರುವುದಾಗಿ ಹೇಳಿದ್ದಾರೆ.

ಈ ನಡುವೆ ಅವರು ಯುಕೆ ಸಂಸತ್ತಿನಲ್ಲಿ ವಿದಾಯ ಭಾಷಣ ಮಾಡಿದ್ದು, ಭಾಷಣವು ವೈರಲ್​ ಆಗುತ್ತಿದ್ದಂತೆ, ಆಸಕ್ತಿದಾಯಕ ಸಂಗತಿಯು ನೆಟ್ಟಿಗರನ್ನು ಸೆಳೆಯಿತು. ಮಾಜಿ ಪ್ರಧಾನಿ ಥೆರೆಸಾ ಮೇ, ಬೋರಿಸ್​ ಪರವಾಗಿ ಎದು ನಿಂತು ಚಪ್ಪಾಳೆ ತಟ್ಟಲು ಆಸಕ್ತಿ ತೋರಿಸದ ಪ್ರಸಂಗ ನಡೆಯಿತು.

ಜಾನ್ಸನ್​ ಅವರು ‘ಟರ್ಮಿಮಿನೇಟರ್​ 2: ಜಡ್ಜ್​ಮೆಂಟ್​ ಡೇ’ ಸಂವಾದವನ್ನು ಉಲ್ಲೇಖಿಸಿ ತಮ್ಮ ಭಾಷಣವನ್ನು ಕೊನೆಗೊಳಿಸಿದರು. ಈ ದೇಶವನ್ನು ಕೋವಿಡ್​ ಸಾಂಕ್ರಾಮಿಕದ ಸಂದರ್ಭದಲ್ಲಿ ನಾವು ಸಹಾಯ ಮಾಡಿದ್ದೇವೆ ಎಂದು ಹೇಳಲು ಮರೆಯಲಿಲ್ಲ.

ಭಾಷಣವು ಕೊನೆಯಲ್ಲಿ ಅಲ್ಲಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾಜಿ ಪ್ರಧಾನಿ ಥೆರೆಸಾ ಮೇ ಮಾತ್ರ ಕೆಲ ಕ್ಷಣ ಕುಳಿತೇ ಇದ್ದರು. ಎಲ್ಲರೂ ಚಪ್ಪಾಳೆ ತಟ್ಟುತ್ತಿದ್ದರೂ ಅವರೊಬ್ಬರು ಮಾತ್ರ ಸುಮ್ಮನಿದ್ದರು. ಈ ಬೆಳವಣಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರಲ್ಲಿ ಕೆಲವರು ಈ ವರ್ತನೆಯನ್ನು ಟೀಕಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...