alex Certify ಇಟ್ಟಿಗೆ ಗೋಡೆಯನ್ನು ಹತ್ತುವ ಹಾವಿನ ವಿಡಿಯೋ ವೈರಲ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಟ್ಟಿಗೆ ಗೋಡೆಯನ್ನು ಹತ್ತುವ ಹಾವಿನ ವಿಡಿಯೋ ವೈರಲ್….!

ಹಾವೊಂದು ಇಟ್ಟಿಗೆ ಗೋಡೆಯ ಮೇಲೆ ಏರುತ್ತಿರುವ ವಿಡಿಯೋ ವೈರಲ್ ಆಗಿದೆ. ಅಮೆರಿಕದ ಅರಿಜೋನಾದ ಕೊರೊನಾಡೊ ರಾಷ್ಟ್ರೀಯ ಸ್ಮಾರಕದಲ್ಲಿ ಸೆರೆಹಿಡಿಯಲಾದ ಕ್ಲಿಪ್ ಅನ್ನು ರಾಷ್ಟ್ರೀಯ ಉದ್ಯಾನವನದ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ.

ಹಾವು ತೆವಳುವುದು ಖುಷಿಯನ್ನೇನು ತರುವುದಿಲ್ಲ. ಆದರೆ ಈ ಕ್ಲಿಪ್ ನೆಟ್ಟಿಗರಿಗೆ ಹಳೆಯ ನೆನಪನ್ನು ಕೆದಕಿದೆ. ಹಳೆಯ ನೋಕಿಯಾ ಫೋನ್‌ಗಳಲ್ಲಿನ ಸ್ನೇಕ್ ವಿಡಿಯೋ ಗೇಮ್ ಅನ್ನು ಅನೇಕರು ನೆನಪಿಸಿಕೊಂಡರು.

ವಿಡಿಯೋದಲ್ಲಿನ ಹಾವಿನ ದೇಹದಾದ್ಯಂತ ಕೆಂಪು, ಕಪ್ಪು ಮತ್ತು ಬಿಳಿ ಅಡ್ಡಪಟ್ಟಿಗಳಿವೆ.

ಈ ಕ್ಲಿಪ್ ಜಾಲತಾಣದಲ್ಲಿ ಕಾಣಿಸಿಕೊಂಡ ತಕ್ಷಣ ಬಳಕೆದಾರರು ಕಾಮೆಂಟ್ ವಿಭಾಗವನ್ನು ತುಂಬಿದ್ದಾರೆ. ನಾನು ನನ್ನ ನೋಕಿಯಾದಲ್ಲಿ ಈ ಆಟವನ್ನು ಆಡುತ್ತಿದ್ದೆ. ಆದರೂ ಗ್ರಾಫಿಕ್ಸ್ ಉತ್ತಮವಾಗಿಲ್ಲ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಫೇಸ್‌ಬುಕ್‌ನಲ್ಲಿ ಈ ವಿಡಿಯೋಗೆ ಇದುವರೆಗೆ ಸುಮಾರು 3 ಲಕ್ಷ ವೀಕ್ಷಣೆ ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...