alex Certify ರಾಜಸ್ಥಾನಿ ಗೀತೆಗೆ ಪುಟ್ಟ ಬಾಲೆಯಿಂದ ಬೊಂಬಾಟ್ ನೃತ್ಯ: ವಿಡಿಯೋ ನೋಡಿ ಬೆರಗಾದ ಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜಸ್ಥಾನಿ ಗೀತೆಗೆ ಪುಟ್ಟ ಬಾಲೆಯಿಂದ ಬೊಂಬಾಟ್ ನೃತ್ಯ: ವಿಡಿಯೋ ನೋಡಿ ಬೆರಗಾದ ಜನ

ತನ್ನ ಶಾಲೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಬಾಲಕಿಯೊಬ್ಬಳು ಡ್ಯಾನ್ಸ್ ಮಾಡಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ. ತನ್ನ ಶಾಲಾ ಸಮವಸ್ತ್ರವನ್ನು ಧರಿಸಿರುವ ಬಾಲಕಿಯು ಜನಪ್ರಿಯ ರಾಜಸ್ಥಾನಿ ಗೀತೆಯಾದ ‘ಮೇರಾ ಬಲ್ಮಾ ಬಡಾ ಸಯಾನಾ’ ಗೀತೆಗೆ ನೃತ್ಯ ಮಾಡಿದ್ದು ನೆಟ್ಟಿಗರು ಮನಸೋತಿದ್ದಾರೆ.

ಶಾಲೆಯ ಮೈದಾನದಲ್ಲಿ ಕುಳಿತಿರುವ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಆಕೆಯನ್ನು ಹುರಿದುಂಬಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಶಾಲೆಯು ಏರ್ಪಡಿಸಿದ್ದ ದೀಪಾವಳಿ ಕಾರ್ಯಕ್ರಮದ ಒಂದು ಭಾಗವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಚಿಕ್ಕ ಹುಡುಗಿಯ ಈ ನೃತ್ಯ ಮನಸೂರೆಗೊಳ್ಳುವಂತಿದೆ. ಎರಡು ದಿನಗಳಲ್ಲಿಯೇ ಈಕೆ ಮಾಡಿದ ನೃತ್ಯದ ವಿಡಿಯೋ ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಎಂಟು ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...