alex Certify ಒಡಿಶಾದಲ್ಲಿ ಕಣ್ಣಿಗೆ ಕಾಣಿಸಿದ ವಿಶೇಷ ಪ್ರಜಾತಿಯ ಹುಲಿ: ಮರ ಹತ್ತಲು ಪ್ರಯತ್ನ ಮಾಡಿದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಡಿಶಾದಲ್ಲಿ ಕಣ್ಣಿಗೆ ಕಾಣಿಸಿದ ವಿಶೇಷ ಪ್ರಜಾತಿಯ ಹುಲಿ: ಮರ ಹತ್ತಲು ಪ್ರಯತ್ನ ಮಾಡಿದ ವಿಡಿಯೋ ವೈರಲ್

article-image

ಭಾರತದಲ್ಲಿ ಅನೇಕ ತಳಿಯ ಹುಲಿಗಳಿವೆ. ವಿಶ್ವದೆಲ್ಲೆಡೆ ನೋಡಲು ಸಿಗದಂತಹ ಅಪರೂಪದ ತಳಿಯ ಹುಲಿಗಳು ಕೂಡ ಇಲ್ಲಿ ನೋಡಬಹುದಾಗಿದೆ. ಅಂತಹ ಅಪರೂಪದ ಹುಲಿಗಳಲ್ಲಿ ಮೆಲನಿಸ್ಟಿಕ್ ಹುಲಿ ಕೂಡ ಒಂದು.

ಇದು ನೋಡಲು ಸಾಮಾನ್ಯವಾದ ಹುಲಿಯಂತಿರುತ್ತೆ. ಆದರೆ ಇದರ ಚರ್ಮದ ಬಣ್ಣದಲ್ಲಿ ಕಪ್ಪು ಬಣ್ಣ ಮಿಶ್ರಿತವಾದಂತಿರುತ್ತೆ. ಒಂದು ರೀತಿಯಲ್ಲಿ ಇದು ನೋಡಲು ಕಪ್ಪುಪಟ್ಟಿ ಹೊಂದಿರುವ ದೊಡ್ಡ ಬೆಕ್ಕಿನ ರೂಪದಲ್ಲಿರುತ್ತೆ. ಅ ಈಗ ಈ ಹುಲಿಗಳು ಅಪರೂಪದಲ್ಲೇ ಅಪರೂಪವಾಗಿವೆ. ಅದೇ ಹುಲಿಯ ವಿಡಿಯೋ ಒಂದು ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ವನ್ಯಜೀವಿಗಳನ್ನು ರಕ್ಷಿಸುವ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ವ್ಯಕ್ತಿಗಳಿಗೆ ಮೀಸಲಾಗಿರುವ ವಿಶ್ವರೇಂಜರ್ ದಿನದ ಸಂದರ್ಭದಲ್ಲಿ ಐಎಫ್ಎಸ್ ಅಧಿಕಾರಿ ಡಾ. ಸಾಮ್ರಾಟ್ ಗೌಡ, ಈ ಮೆಲಸ್ಟಿಕ್ ಹುಲಿಯ ವಿಡಿಯೋ ಒಂದನ್ನ ಶೇರ್ ಮಾಡಿಕೊಂಡಿದ್ದಾರೆ. ಒಡಿಶಾದ ಸಿಮಿಲಿಪಾಲ್‌ ಟೈಗರ್ ರಿವರ್ಸ್ ಎಂಬಲ್ಲಿ ಕಾಣಿಸಿಕೊಂಡ ಈ ಹುಲಿ ಮರದ ಮೇಲೆ ಹತ್ತುವ ಪ್ರಯತ್ನ ಪದೇ ಪದೇ ಮಾಡುತ್ತಿರುವುದನ್ನ ಗಮನಿಸಬಹುದು.

ಇಲ್ಲಿ ಹುಲಿ ಮರ ಹತ್ತುವ ಪ್ರಯತ್ನ ಮಾಡುತ್ತಿರುತ್ತೆ. ಅದು ತನ್ನಿಂದ ಸಾಧ್ಯವಿಲ್ಲ ಅನ್ನೋದು ಗೊತ್ತಿದ್ದರೂ ಹುಲಿ ಧೈರ್ಯ ಕಳೆದುಕೊಂಡಿರಲಿಲ್ಲ. ಬದಲಾಗಿ ಮರ ಹತ್ತೇ ಹತ್ತಬೇಕು ಅನ್ನೊ ಪ್ರಯತ್ನ ಮಾಡುತ್ತೆ. ಕೆಲ ನಿಮಿಷ ಅದು ಗೊಂದಲಗೊಂಡು ಅದೇ ಮರದ ಕೆಳಗೆ ಸುತ್ತಾಡುತ್ತೆ. ಕೊನೆಗೆ ತನ್ನ ಪ್ರಯತ್ನ ವ್ಯರ್ಥ ಅನ್ನೋದು ಅರ್ಥ ಆದಂತೆ ಆ ಹುಲಿ ಅಲ್ಲಿಂದ ನಿರ್ಗಮಿಸುತ್ತೆ.

ಈ ವಿಡಿಯೋ ಕೇವಲ 25 ಸೆಕೆಂಡ್ನದ್ದಾಗಿದೆ. ಆದರೂ ಇದರಿಂದ ಕಲಿಯುವ ಪಾಠ ದೊಡ್ಡದು ಎಂದು ಈ ವಿಡಿಯೋ ನೋಡಿದ 17,000 ನೆಟ್ಟಿಗರು ತಮ್ಮ ಅಭಿಪ್ರಾಯವನ್ನ ಹೇಳಿದ್ದಾರೆ. ಅಷ್ಟೆ ಅಲ್ಲ ಕೆಲವರು ಈ ಅಪರೂಪದ ಹುಲಿಯನ್ನ ನೋಡಿ, ಇವು ನಮ್ಮದೇಶದಲ್ಲಿ ಇರುವ ಹುಲಿಗಳಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...