ಡ್ರೋನ್ ಮೂಲಕ ಪಕ್ಷಿನೋಟದ ವಿಡಿಯೋ ಸೆರೆ ಹಿಡಿಯುವುದು ಬಹಳ ಮಂದಿಗೆ ಇಷ್ಟ. ಆದರೆ ಇದೇ ಕೆಲಸವನ್ನು ಖುದ್ದು ಪಕ್ಷಿಯೇ ನಿಮಗೆ ಮಾಡಿದರೆ ಹೇಗೆ ?
ವ್ಯಕ್ತಿಯೊಬ್ಬರ ಫೋನ್ ಕಸಿದು ಹಾರಿಹೋಗುತ್ತಿರುವ ಗಿಣಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟ್ವಿಟರ್ ಬಳಕೆದಾರ @fred035schultz ಶೇರ್ ಮಾಡಿರುವ ಈ ವಿಡಿಯೋದಲ್ಲಿ ಗಿಣಿಯ ಹಿಂದೆ ಆ ವ್ಯಕ್ತಿ ಓಡಿಹೋಗುತ್ತಿರುವುದನ್ನು ನೋಡಬಹುದಾಗಿದೆ.
“ಅದ್ಧೂರಿ ಟ್ರಿಪ್ ಒಂದರ ವೇಳೆ ಗಿಣಿ ಫೋನ್ ತೆಗೆದುಕೊಂಡು ಹೋಗಿದೆ” ಎಂದು @fred035schultz ಬರೆದಿದ್ದು, 1.49 ನಿಮಿಷದ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಭಾರೀ ವೈರಲ್ ಆಗಿರುವ ಈ ಕ್ಲಿಪ್ಗೆ ಅದಾಗಲೇ ಐದು ಲಕ್ಷಕ್ಕೂ ಹೆಚ್ಚು ವೀವ್ಸ್ ಸಿಕ್ಕಿವೆ.