alex Certify ಪಾಕ್ ಬೀದಿಯಲ್ಲಿ ಕಡ್ಲೆ ಮಾರಾಟ ಮಾಡಿದ ಹಿರಿಯ ಕ್ರಿಕೆಟಿಗ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಬೀದಿಯಲ್ಲಿ ಕಡ್ಲೆ ಮಾರಾಟ ಮಾಡಿದ ಹಿರಿಯ ಕ್ರಿಕೆಟಿಗ…..!

Video Of Pakistan Pacer Wahab Riaz Selling 'Chana' On Streets Goes Viral : Watch » Kashmir Studentಪಾಕಿಸ್ತಾನದ ಹಿರಿಯ ಕ್ರಿಕೆಟ್ ಆಟಗಾರ ವಹಾಬ್ ರಿಯಾಜ಼್ ಬೀದಿಯಲ್ಲಿ ಕಡ್ಲೆ ಮಾರಾಟ ಮಾಡುತ್ತಿದ್ದಾರೆ. ಆದ್ರೆ ಅವರು ನಿಜಕ್ಕೂ ಕಡ್ಲೆ ಮಾರಾಟ ಮಾಡುತ್ತಿಲ್ಲ, ಬೀದಿಯಲ್ಲಿ ಕಡ್ಲೆ ಮಾರುವ ವ್ಯಾಪಾರಿಯಂತೆ ನಟಿಸಿದ್ದಾರೆ.

ಪಾಕಿಸ್ತಾನದಲ್ಲಿ, ಭಾರತದಂತೆ ಕಡ್ಲೆ ಹಾಗೂ ಕಡ್ಲೆ ಬೀಜವನ್ನ ಹುರಿದು ಮಾರಾಟ ಮಾಡಲಾಗತ್ತೆ.‌ ಅಂತಾ ಕಡ್ಲೆ ವ್ಯಾಪಾರಿಯೊಬ್ಬರಿಂದ ಕೈಗಾಡಿ ಪಡೆದು ಕಡ್ಲೆ ಹುರಿಯುತ್ತಿರುವ ದೃಶ್ಯದ ತುಣಕನ್ನ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ವೇಗಿ ಬೌಲರ್ ವಹಾಬ್ ರಿಯಾಜ಼್ ಅದಕ್ಕೆ ಫನ್ನಿಯಾದ ಶೀರ್ಷಿಕೆ ನೀಡಿದ್ದಾರೆ.

ಜೊತೆಗೆ ಹೀಗೆ ಕೈಗಾಡಿ ಹಿಡಿದದ್ದು ನನ್ನ ಬಾಲ್ಯದ ದಿನಗಳನ್ನು ನೆನಪಿಸಿತು ಎಂದಿದ್ದಾರೆ. ವಹಾಬ್ ರವರ ಈ ಫನ್ನಿ ವಿಡಿಯೋವನ್ನ ನೆಟ್ಟಿಗರು ಮೆಚ್ಚಿದ್ದಾರೆ, ಅಲ್ಲದೇ ಪಾಕಿಸ್ತಾನದ ಸ್ಟಾರ್ ಕ್ರಿಕೆಟರ್, ಅಹ್ಮದ್ ಶಾಜ಼ಾದ್ ಕಾಮೆಂಟ್ ಮಾಡಿದ್ದಾರೆ.

ವೇಗಿ ಬೌಲರ್ ವಹಾವ್ ರಿಯಾಜ಼್ 27 ಟೆಸ್ಟ್‌ಗಳು, 91 ODIಗಳು ಮತ್ತು 36 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದಾರೆ. ಟೆಸ್ಟ್‌ ನಲ್ಲಿ 83, ಏಕದಿನದಲ್ಲಿ 120 ಮತ್ತು ಅಂತಾರಾಷ್ಟ್ರೀಯ ಟಿ20ಯಲ್ಲಿ 34 ವಿಕೆಟ್‌ಗಳನ್ನು ಪಡೆದಿದ್ದಾರೆ. ವಹಾಬ್ ರಿಯಾಜ್ ತಮ್ಮ ವೃತ್ತಿಜೀವನದಲ್ಲಿ 1000 ರನ್ ಗಳಿಸಿದ್ದಾರೆ ಮತ್ತು ODIಗಳಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳಿಂದ ವಹಾಬ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.

— Wahab Riaz (@WahabViki) January 10, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...