alex Certify ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೆಟ್ಟಿಗರ ಮನಗೆದ್ದಿದೆ ಅರಬ್​ ಜಾನಪದ ಶೈಲಿ ನೃತ್ಯ

ಮದುವೆ ಸಮಾರಂಭವೊಂದರಲ್ಲಿ ಪುರುಷರ ಗುಂಪೊಂದು ಅರಬ್​​ ಜಾನಪದ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ.

ಕೆನಡಾದಲ್ಲಿ ನಡೆದ ಅರಬ್​​ ಸಂಪ್ರದಾಯದ ಮದುವೆಯಲ್ಲಿ ಸೆರೆಹಿಡಿಯಲಾದ ದೃಶ್ಯ ಇದಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಈ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಅತಿಥಿಗಳು ಡಬ್ಕೆ ಎಂಬ ಹೆಸರಿನ ಅರಬ್​ ಜಾನಪದ ಶೈಲಿಯ ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆ.
ಕೆನಡಾದಲ್ಲಿರುವ ಅರಬ್​ ಪ್ರಜೆಗಳು ಮದುವೆ ಸಮಾರಂಭವೊಂದರಲ್ಲಿ ಡಬ್ಕೆ ಇಲ್ಲವೇ ಡಬ್ಕಾ ಹೆಸರಿನ ನೃತ್ಯವನ್ನ ಮಾಡಿದ್ದಾರೆ ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಇದೊಂದು ರೀತಿಯಲ್ಲಿ ವೃತ್ತಾಕಾರದಲ್ಲಿ ನಿಂತು ಮಾಡುವ ನೃತ್ಯವಾಗಿದ್ದು, ಅರಬ್ಬರು ಸಾಮಾನ್ಯವಾಗಿ ಮದುವೆ ಇಲ್ಲವೇ ಇತರೆ ಸಮಾರಂಭಗಳಲ್ಲಿ ಪ್ರದರ್ಶನ ಮಾಡುತ್ತಾರೆ. ಯುಟ್ಯೂಬ್​ ಸೇರಿದಂತೆ ಸಾಮಾಜಿಕ ಜಾಲತಾಣದ ಸಾಕಷ್ಟು ವೇದಿಕೆಗಳಲ್ಲಿ ಈ ವಿಡಿಯೋವನ್ನ ಶೇರ್​ ಮಾಡಲಾಗಿದ್ದು ವ್ಯಾಪಕ ಮೆಚ್ಚುಗೆ ಗಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...