alex Certify ಹಿಜಾಬ್​ ವಿರೋಧಿಸಿ ಮಾತನಾಡಿದ್ದ ಈಜಿಪ್ಟ್​ ಮಾಜಿ ಅಧ್ಯಕ್ಷರ ಹಳೆ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಜಾಬ್​ ವಿರೋಧಿಸಿ ಮಾತನಾಡಿದ್ದ ಈಜಿಪ್ಟ್​ ಮಾಜಿ ಅಧ್ಯಕ್ಷರ ಹಳೆ ವಿಡಿಯೋ ವೈರಲ್​

ಇರಾನ್​ನಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಯ ನಡುವೆ ಈಜಿಪ್ಟ್​ ಮಾಜಿ ಅಧ್ಯಕ್ಷ ಗಮಾಲ್​ ಅಬ್ದೆಲ್​ ನಾಸರ್​ ಅವರ ಬಹಳ ಹಳೆಯ ವಿಡಿಯೋ ವೈರಲ್​ ಆಗಿದೆ.

ವಿಡಿಯೋದಲ್ಲಿ ಅವರು ಈಜಿಪ್ಟ್​ನಲ್ಲಿ ಮಹಿಳೆಯರಿಗೆ ಹಿಜಾಬ್​ ಅನ್ನು ಕಡ್ಡಾಯಗೊಳಿಸುವ ಕೋರಿಕೆಯನ್ನು ಅಪಹಾಸ್ಯ ಮಾಡಿದ್ದಾರೆ.

1953ರಲ್ಲಿ ಮುಸ್ಲಿಂ ಬ್ರದರ್​ಹುಡ್​ನ ಮುಖ್ಯಸ್ಥರಾಗಿದ್ದ ಹಸನ್ ಅಲ್-ಹುದೈಬಿ ಅವರೊಂದಿಗೆ ತಮ್ಮ ಅಭಿಪ್ರಾಯ ವಿನಿಮಯ ಮಾಡುವ ಸಂದರ್ಭದಲ್ಲಿ ನಡೆದ ಚರ್ಚೆಯನ್ನು ಅವರು ಸಾರ್ವಜನಿಕ ಸಭೆಯಲ್ಲಿ ಹೇಳಿದ್ದಾರೆ. ಈ ಕ್ಲಿಪ್​ ಅನ್ನು ಈಗ ಪತ್ರಕರ್ತ ಸೀಮಸ್​ ಮಲೆಕಾಫ್ಜಲಿ ಅವರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಾವು ನಿಜವಾಗಿಯೂ ಮುಸ್ಲಿಂ ಬ್ರದರ್​ಹುಡ್​ ಜೊತೆ ರಾಜಿ ಮಾಡಿಕೊಳ್ಳಲು ಬಯಸಿದ್ದೆವು. ನಾನು ಮುಸ್ಲಿಂ ಬ್ರದರ್​ಹುಡ್​ ಮುಖ್ಯಸ್ಥರನ್ನು ಭೇಟಿಯಾದೆ ಮತ್ತು ಅವರು ತಮ್ಮ ವಿನಂತಿಗಳನ್ನು ನನ್ನ ಮುಂದಿಟ್ಟರು. ಏನು ಗೊತ್ತ? ಈಜಿಪ್ಟ್​ನಲ್ಲಿ ಹಿಜಾಬ್​ ಧರಿಸುವುದನ್ನು ಕಡ್ಡಾಯಗೊಳಿಸುವುದು ಮತ್ತು ಬೀದಿಯಲ್ಲಿ ನಡೆಯುವ ಪ್ರತಿಯೊಬ್ಬ ಮಹಿಳೆ ತರ್ಹಾ (ಸ್ಕಾರ್ಫ್) ಧರಿಸುವಂತೆ ಮಾಡಿ ಎಂದರು. ನಾನು ಅಸಾಧ್ಯವೆಂದೆ. ಜನರಿಗೆ ಅವರದ್ದೇ ಆದ ನಿಯಮಗಳಿರುತ್ತವೆ. ನಿಮ್ಮ ಮಗಳು ಮೆಡಿಸನ್​ ಓದುತ್ತಿದ್ದಾಳೆ. ಅವಳು ಬುರ್ಕಾ ತೊಡುತ್ತಾಳೆಯೇ ಎಂದು ಪ್ರಶ್ನಿಸಿದೆ ಎಂದು ಭಾಷಣ ಮಾಡಿದಾಗ ಅವರ ಮುಂದೆ ಸಭೆಯಲ್ಲಿ ಕಿಕ್ಕಿರಿದುತುಂಬಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟುತ್ತಾರೆ.

ಅಪ್​ಲೋಡ್​ ಮಾಡಿದ ನಂತರ ವಿಡಿಯೋ ವೈರಲ್​ ಆಗಿ ಸುಮಾರು 765  ಕೆ ವೀಣೆಗಳನ್ನು ಕಂಡಿದೆ. ನಾನು ಇತ್ತೀಚೆಗೆ ಅವರ ಬಹಳಷ್ಟು ಭಾಷಣಗಳನ್ನು ನೋಡಿದ್ದೇನೆ ಮತ್ತು ಅವರು ಪ್ರತಿ ಬಾರಿಯೂ ನನ್ನನ್ನು ನಗಿಸುತ್ತಾರೆ. ಇಂಗ್ಲಿಷ್​ನಲ್ಲಿ ಹಾಸ್ಯವು ಕಳೆದುಹೋಗಿದೆಯೇ ಎಂದು ನನಗೆ ತಿಳಿದಿಲ್ಲ ಆದರೆ ಈ ವ್ಯಕ್ತಿ ಅನೇಕ ಈಜಿಪ್ಟಿನವರಿಗೆ ಹೀರೋ ಆಗಿದ್ದಲ್ಲದೆ ಒಳ್ಳೆಯ ವೈಬ್ಸ್​ಎಸ್​ಎಸ್​ ಎಂದು ಶೀರ್ಷಿಕೆೆ ನೀಡಲಾಗಿದೆ.

ಮಹಿಳೆಯರಿಗೆ ಇಸ್ಲಾಮಿಕ್​ ಗಣರಾಜ್ಯದ ಕಟ್ಟುನಿಟ್ಟಾದ ಡ್ರೆಸ್​ ಕೋಡ್​ ಅನ್ನು ಜಾರಿಗೊಳಿಸುವ ವಿಚಾರದಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಇರಾನಿನ ಮಹಿಳೆ ಮಹ್ಸಾ ಅಮಿನಿಯ ಮರಣದ ನಂತರ ಡ್ರೆಸ್​ ಕೋಡ್​ ವಿಷಯ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಘಟನೆ ವ್ಯಾಪಕ ಪ್ರತಿಭಟನೆಗೆ ಸಹ ಕಾರಣವಾಗಿದೆ.

ನೈತಿಕತೆಯ ಪೊಲೀಸ್​ ವಿರುದ್ಧ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಇರಾನ್​ ಮಹಿಳೆಯರು ತಮ್ಮ ಕೂದಲನ್ನು ಕತ್ತರಿಸುತ್ತಿದ್ದಾರೆ, ಅವರ ಹಿಜಾಬ್​ಗಳ ಸುಡುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಕೃತ್ಯಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...