alex Certify ಸಿಧು ಮೂಸೆವಾಲಾ ಹಾಡಿಗೆ ಯುವಕ – ಯುವತಿಯರಿಂದ ಬೊಂಬಾಟ್ ಸ್ಟೆಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಧು ಮೂಸೆವಾಲಾ ಹಾಡಿಗೆ ಯುವಕ – ಯುವತಿಯರಿಂದ ಬೊಂಬಾಟ್ ಸ್ಟೆಪ್ಸ್

ಗಾಯಕ ಸಿದ್ದು ಮೂಸೆವಾಲಾ ನಿಧನರಾಗಿರಬಹುದು, ಆದರೆ ಅವರ ಹವಾ ಇನ್ನೂ ಜೀವಂತವಾಗಿದೆ. ಮೇ 29ರಂದು ಪಂಜಾಬ್​ನ ಮಾನ್ಸಾ ಜಿಲ್ಲೆಯಲ್ಲಿ ಶಾರ್ಪ್​ಶೂಟರ್​ಗಳಿಂದ ಅವರು ಹತರಾಗಿದ್ದರು. ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯ ಇನ್ನೂ ಮುಂದುವರಿದಿದೆ.

ಇದೀಗ ಡ್ಯಾನ್ಸ್​ ಟ್ರೂಪ್​ ಒಂದು ಸಿದ್ದು ಮೂಸೆ​ವಾಲಾರ “ಲೆವೆಲ್ಸ್​’ ಹಾಡಿಗೆ ಭಾಂಗ್ರಾ ಮಾಡುವ ಮೂಲಕ ಗಮನ ಸೆಳೆದಿದೆ, ಆ ಡ್ಯಾನ್ಸ್‌ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಆ ವಿಡಿಯೋವನ್ನು ಭಾಂಗ್ರಾ ಎಂಪೈರ್​ ಎಂಬ ಪೇಜ್​ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದೆ. ಚಿಕ್ಕ ಕ್ಲಿಪ್​ನಲ್ಲಿ, ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿರುವ ಡ್ಯಾನ್ಸ್​ ಟ್ರೂಪ್​ ಮೂಸೆವಾಲಾ ಅವರ ಟ್ರಾಕ್​ನ ಆಕರ್ಷಕ ಬೀಟ್​ಗಳಿಗೆ ಮನಮೋಹಕ ಭಾಂಗ್ರಾವನ್ನು ಪ್ರದರ್ಶಿಸುವುದನ್ನು ಕಾಣಬಹುದು.

ಈ ವಿಡಿಯೋ 2 ಮಿಲಿಯನ್​ ವೀಕ್ಷಣೆಯಾಗಿದ್ದು, ನೆಟ್ಟಿಗರು ಈ ಪ್ರದರ್ಶನಕ್ಕೆ ಸಂಪೂರ್ಣವಾಗಿ ಬೌಲ್ಡ್​ ಆಗಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. “ಪ್ರತಿ ಸೆಕೆಂಡ್​ ಸಿದ್ದು ಮೂಸೆವಾಲಾ ಅವರನ್ನು ಪ್ರೀತಿಸುತ್ತೇನೆ” ಎಂದು ಒಬ್ಬರು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...