alex Certify ಮಹಿಳೆಯನ್ನು ಅನುಕರಿಸಿ ಡಾನ್ಸ್ ಮಾಡೋ ಎಮ್ಮೆ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯನ್ನು ಅನುಕರಿಸಿ ಡಾನ್ಸ್ ಮಾಡೋ ಎಮ್ಮೆ….! ವಿಡಿಯೋ ವೈರಲ್

ಜಾಲತಾಣವು ಹಲವಾರು ತಮಾಷೆಯ ಪ್ರಾಣಿಗಳ ವಿಡಿಯೋಗಳಿಂದ ತುಂಬಿದ್ದು, ನೆಟ್ಟಿಗರನ್ನು ಖುಷಿಪಡಿಸುತ್ತದೆ. ಈಗ ದೇಶೀಯ ಎಮ್ಮೆಯ ಡ್ಯಾನ್ಸ್ ವಿಡಿಯೋ ವೈರಲ್ ಕ್ಲಿಪ್ ಆಗಿದ್ದು, ಇದು ಮಹಿಳೆಯೊಂದಿಗೆ ನೃತ್ಯ ಮಾಡುವುದನ್ನು ಕಾಣಬಹುದು.

ಸಾಕು ನಾಯಿ ಅಥವಾ ಬೆಕ್ಕುಗಳು ಅದರ ಮಾಲೀಕರ ಸೂಚನೆ ಪಾಲಿಸುವುದು ಸಾಮಾನ್ಯ. ಆದರೆ ಎಮ್ಮೆಯ ನೃತ್ಯ ಪ್ರದರ್ಶನವು ಈಗ ಜಾಲತಾಣ ಬಳಕೆದಾರರಿಗೆ ಅಪರೂಪದ ಸನ್ನಿವೇಶವಾಗಿದೆ.

ಎಮ್ಮೆ ನೃತ್ಯ ಮಾಡುತ್ತಿದೆ ಎಂದು ಹಲವರು ನಂಬುವುದಿಲ್ಲವಾದರೂ, ಅದರ ವರ್ತನೆ ಗಮನ ಸೆಳೆಯುವಂತಿದೆ.

ವೈರಲ್ ಕ್ಲಿಪ್‌ನಲ್ಲಿ, ಎಮ್ಮೆಯ ಮಾಲೀಕರಂತೆ ಕಾಣುವ ಮಹಿಳೆ ಮನೆಯ ಹಿತ್ತಲಿನಲ್ಲಿ ತನ್ನ ಸಾಕು ಎಮ್ಮೆಗಳಿಗೆ ಆಹಾರ ನೀಡುತ್ತಿರುವಾಗ ಕೆಲವು ಭಾಂಗ್ರಾ ಹೆಜ್ಜೆಗಳನ್ನು ಹಾಕಲು ಪ್ರಾರಂಭಿಸುತ್ತಾರೆ. ಅವರು ನೃತ್ಯ ಮಾಡುವಾಗ, ಮಹಿಳೆ ತನ್ನೊಂದಿಗೆ ಸೇರಿಕೊಳ್ಳುವಂತೆ ಎಮ್ಮೆಯನ್ನು ಸಹ ಸೂಚಿಸುತ್ತಾರೆ.

ಆಶ್ಚರ್ಯಕರ ಟ್ವಿಸ್ಟ್ ನಲ್ಲಿ, ಅ ಎಮ್ಮೆ ಮಹಿಳೆಯನ್ನು ಅನುಕರಿಸಲು ಪ್ರಯತ್ನಿಸುತ್ತದೆ. ಅದು ಜಿಗಿಜಿಗಿದು ಕುಣಿಯುತ್ತದೆ. ಈ ವೇಳೆ ಮಹಿಳೆ ಮತ್ತು ಎಮ್ಮೆ ಜೊತೆ ಕೆಲವು ಮಕ್ಕಳು ಸಹ ಸೇರಿಕೊಂಡಿದ್ದಾರೆ. ವೈರಲ್ ವಿಡಿಯೊದಲ್ಲಿ ಮಕ್ಕಳು ಸ್ಪಷ್ಟವಾಗಿ ಕಾಣಿಸದಿದ್ದರೂ, ಅವರ ನಗು ಕೇಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...