alex Certify ಅದೃಷ್ಟ ಅಂದ್ರೆ ಇದಪ್ಪಾ…! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದಪ್ಪಾ…! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ

ಅದೃಷ್ಟವೊಂದು ಜೊತೆಲಿದ್ದರೆ ಸಾವಿನ ದವಡೆಯಿಂದ ಬೇಕಿದ್ದರೂ ಪಾರಾಗಿಬಿಡಬಹುದು..! ಇಷ್ಟಕ್ಕೂ ಈ ಮಾತನ್ನ ಇಲ್ಲಿ ಹೇಳ್ತಿರೋದಕ್ಕೆ ಕಾರಣ ಸಹ ಇದೆ. ವಿಯೆಟ್ನಾಂನಲ್ಲಿ ನಡೆದ ಮೈ ಝುಂ ಎನ್ನಿಸುವ ಘಟನೆಯೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ರಸ್ತೆಯಲ್ಲಿ ಬೈಕ್​ ಓಡಿಸಿಕೊಂಡು ಹೋಗುತ್ತಿದ್ದವನ ಮೇಲೆ ಇನ್ನೇನು ಕಬ್ಬಿಣದ ಗೇಟು ಬಿದ್ದೇ ಹೋಯ್ತು ಅನ್ನೋವಷ್ಟರಲ್ಲಿ ಆತ ಅಪಾಯದಿಂದ ಪಾರಾಗಿದ್ದಾನೆ.

ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯಾವಳಿ ಇದಾಗಿದ್ದು, ವ್ಯಕ್ತಿಯೊಬ್ಬ ಕಾರಿನಿಂದ ಇಳಿದು ಹೊರಗೆ ಬರ್ತಾರೆ. ಅಲ್ಲೇ ಎದುರಿದ್ದ ಮನೆಯ ಬಳಿ ಹೋದ ವ್ಯಕ್ತಿ ಅಲ್ಲಿದ್ದ ಕಬ್ಬಿಣದ ಗೇಟಿನ ಹತ್ತಿರ ಹೋಗಿ ಇಟ್ಟಿಗೆಯನ್ನ ಸರಿಸುತ್ತಾನೆ. ಆತನ ಗೇಟಿಗೆ ಆಧಾರವಾಗಿದ್ದ ಇಟ್ಟಿಗೆಯನ್ನ ಸರಿಸಿದ್ದೇ ತಡ ಗೇಟು ರೋಡಿನ ಕಡೆ ಮುಖ ಮಾಡಿ ಬೀಳೋಕೆ ಶುರುವಾಗುತ್ತೆ.

ಅದೇ ವೇಳೆಗೆ ಸರಿಯಾಗಿ ಸ್ಕೂಟಿಯಲ್ಲಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಇನ್ನೇನು ಆತನ ತಲೆಮೇಲೆ ಗೇಟು ಬಿದ್ದೇಬಿಡ್ತು ಅನ್ನೋವಷ್ಟರಲ್ಲಿ ಆ ವ್ಯಕ್ತಿ ಗೇಟನ್ನ ಹಿಡಿದುಕೊಂಡಿದ್ದಾನೆ. ಕೊನೆಗೆ ಬೈಕ್​ನ್ನು ನಿಲ್ಲಿಸಿ ಬಂದ ಬೈಕ್​ ಸವಾರ ಗೇಟನ್ನ ಸರಿ ಮಾಡಲು ಆ ವ್ಯಕ್ತಿಗೆ ನೆರವಾಗುತ್ತಾನೆ. ಎದೆ ಝಲ್​ ಎನ್ನಿಸುವ ಈ ದೃಶ್ಯವನ್ನ ಯುಟ್ಯೂಬ್​ ನಲ್ಲಿ ಶೇರ್​ ಮಾಡಲಾಗಿದ್ದು‌, ವಿಡಿಯೋ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...