alex Certify ಪಾರ್ಕ್ ನಲ್ಲಿ ಮಹಿಳೆಯರು ವಾಕ್ ಮಾಡುವಾಗ ಕಿಡಿಗೇಡಿ ಕೃತ್ಯ: ವಿಡಿಯೋ ಮಾಡುತ್ತಿದ್ದ ಯುವಕ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಕ್ ನಲ್ಲಿ ಮಹಿಳೆಯರು ವಾಕ್ ಮಾಡುವಾಗ ಕಿಡಿಗೇಡಿ ಕೃತ್ಯ: ವಿಡಿಯೋ ಮಾಡುತ್ತಿದ್ದ ಯುವಕ ಅರೆಸ್ಟ್

ಬೆಂಗಳೂರಿನ ಜಯನಗರದ ಅಕ್ಕಮಹಾದೇವಿ ಪಾರ್ಕ್ ನಲ್ಲಿ ಮಹಿಳೆಯರ ವಿಡಿಯೋ ಮಾಡುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಜಯನಗರದ 7 ನೇ ಬ್ಲಾಕ್ ನಿವಾಸಿ ಪ್ರಸನ್ನ(42) ಬಂಧಿತ ಆರೋಪಿ ಎಂದು ಹೇಳಲಾಗಿದೆ. ಮಾರ್ಚ್ 31 ರಂದು ಸಂಜೆ ಪಾರ್ಕ್ ನಲ್ಲಿ ಶಿಲ್ಪಾ ಮತ್ತು ಸುಮಾ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಸನ್ನ ವಿಡಿಯೋ ಮಾಡಿಕೊಂಡಿದ್ದಾನೆ.

ಈತನ ವರ್ತನೆಯಿಂದ ಅನುಮಾನಗೊಂಡ ಮಹಿಳೆಯರು ಪಾರ್ಕ್ ನಲ್ಲಿ ಇದ್ದವರ ನೆರವಿನೊಂದಿಗೆ ಪ್ರಸನ್ನನ ಮೊಬೈಲ್ ಪರಿಶೀಲಿಸಿದಾಗ ಅದರಲ್ಲಿ ಶಿಲ್ಪಾ ಮತ್ತು ಸುಮಾ ಅವರ ಫೋಟೋ, ವಿಡಿಯೋಗಳು ಕಂಡುಬಂದಿದೆ. ಪ್ರಸನ್ನನನ್ನ ಹಿಡಿದ ಸ್ಥಳೀಯರು ಆತನನ್ನು ಜಯನಗರ ಪೊಲೀಸರಿಗೊಪ್ಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...