alex Certify ನಡೆಯುವುದಕ್ಕೂ ಪರದಾಡಿದ ಡ್ರಗ್ಸ್​ ಸೇವಿಸಿದ್ದ ಯುವತಿ; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಡೆಯುವುದಕ್ಕೂ ಪರದಾಡಿದ ಡ್ರಗ್ಸ್​ ಸೇವಿಸಿದ್ದ ಯುವತಿ; ವಿಡಿಯೋ ವೈರಲ್

ಮಾದಕ ವ್ಯಸನದ ಅಮಲಿನಲ್ಲಿ ಯುವತಿ ನಡೆಯಲು ಕಷ್ಟಪಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಆ ವಿಡಿಯೋ ಪಂಜಾಬ್​ನ ಅಮೃತಸರದಲ್ಲಿ ನಡೆದ ಘಟನೆಯಾಗಿದ್ದು, ಮೊಬೈಲ್​ನಲ್ಲಿ ಸೆರೆ ಹಿಡಿಯಲಾಗಿದೆ. ರಾಜ್ಯದಲ್ಲಿ ಮಾದಕ ದ್ರವ್ಯ ಸೇವನೆ ವಿಪರೀತವಾಗಿದೆ ಎಂಬ ಆತಂಕದ ನಡುವೆ ಯುವತಿಯು ಮಾದಕ ದ್ರವ್ಯ ಸೇವಿಸಿದ ಬಗ್ಗೆ ಹಲವರು ಕಳವಳಗಳನ್ನು ಹುಟ್ಟುಹಾಕಿದೆ.

55 ಸೆಕೆಂಡುಗಳ ವಿಡಿಯೊ ಕ್ಲಿಪ್​ನಲ್ಲಿ, ಯುವತಿ ನಡೆಯುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದರು. ಆ ವಿಡಿಯೋವನ್ನು ಮಾದಕ ವ್ಯಸನ ಮತ್ತು ವ್ಯಸನಿಗಳಿಗೆ ಹೆಸರುವಾಸಿಯಾದ ಅಮೃತಸರ ಪೂರ್ವದ ಮಕ್ಬೂಲ್ಪುರ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ.

ಈ ಘಟನೆ ಬೆಳಕಿಗೆ ಬಂದ ಬಳಿಕ ಮಕ್ಬೂಲ್​ಪುರ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಯುವತಿಯೇ ಡ್ರಗ್ಸ್​ ಸೇವಿಸಿದ್ದರೋ ಅಥವಾ ಯಾರಾದರೂ ಒತ್ತಾಯಪೂರ್ವಕವಾಗಿ ಡ್ರಗ್ಸ್​ ಕೊಟ್ಟಿದ್ದರೋ ಎಂಬುದು ಗೊತ್ತಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...