alex Certify ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ಸಾಹಿತಿ ಗುರುಲಿಂಗ ಕಾಪಸೆ ನಿಧನ

ಧಾರವಾಡ: ಸಾಹಿತಿ ಗುರುಲಿಂಗ ಕಾಪಾಸೆ(96) ಮಂಗಳವಾರ ತಡರಾತ್ರಿ ಧಾರವಾಡದ ನಿರ್ಮಲಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಧಾರವಾಡದ ಸಪ್ತಾಪೂರದ ದುರ್ಗಾ ಕಾಲೋನಿಯ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬಿ.ಕೆ. ಲೋಣಿಯಲ್ಲಿ 1928ರ ಏಪ್ರಿಲ್ 2ರಂದು ಜನಿಸಿದ ಗುರುಲಿಂಗ ಕಾಪಸೆ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ.

ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ ಸೇರಿ ಹಲವು ಕೃತಿ ರಚಿಸಿದ್ದಾರೆ.

ಅನೇಕ ಸಮ್ಮೇಳನಗಳಲ್ಲಿಯೂ ಪಾಲ್ಗೊಂಡು ವಿದ್ವತ್ ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ.

ಕೃತಿಗಳು

ಅಕ್ಕಮಹಾದೇವಿ

ಮಧುರಚೆನ್ನ

ಶ್ರೀ ಅರವಿಂದರು

ಬಸವೇಶ್ವರ

ಹಲಸಂಗಿ ಗೆಳೆಯರು

ಪ್ರವಾಸಕಥನ

ಶಾಲ್ಮಲೆಯಿಂದ ಗೋದಾವರಿಯವರೆಗೆ

ಮಕ್ಕಳ ಸಾಹಿತ್ಯ

ಕವಿ ರವಿಂದ್ರರು

ಶಿ.ಶಿ.ಬಸವನಾಳ

ವಿಮರ್ಶೆ

ಸಾಹಿತ್ಯ ಸಂಬಂಧ

ಬೇಂದ್ರೆ-ಮಧುರಚೆನ್ನ ಸಖ್ಯಯೋಗ

ಸಂಪಾದಿತ

ಕಾಲ-ಕವಿ (ಕಾವ್ಯ)

ಪಾರಮಾರ್ಥ ಗೀತಾ ಪ್ರವಚನ

ಹರಿಹರನ ಐದು ರಗಳೆಗಳು

ಅರವಿಂದ ಪರಿಮಳ

ಹೈಮವತಿ ಶೈಶವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ)

ಚೆಂಬೆಳಕು (ಕಣವಿ ಅಭಿನಂದನ ಗ್ರಂಥ)

ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ)

ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ

ಭವ್ಯ ಮಾನವ ಕಾವ್ಯ ದರ್ಶನ

ಜ್ಞಾನಸಿಂಧು

ಪಿ.ಧೂಲಾಸಾಹೇಬ

ಮಧುರಚೆನ್ನರ ಲೇಖನಗಳು

ಕನ್ನಡ ಕಾವಲು

ಚಾಮರಸ

ಮುಗಿಯದ ಹಾಡು

ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ)

ಅನುವಾದ

ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ)

ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ)

ಪುರಸ್ಕಾರ

ವರದರಾಜ ಆದ್ಯ ಪ್ರಶಸ್ತಿ

ಆನಂದಕಂದ ಪ್ರಶಸ್ತಿ

ಸ.ಸ.ಮಾಳವಾಡ ಪ್ರಶಸ್ತಿ

ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

ರಾಜ್ಯ ನಾಟಕ ಅಕಾಡೇಮಿ ಫೆಲೋಶಿಪ್

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...