alex Certify ಬೆಚ್ಚಿಬೀಳಿಸುವಂತಿದೆ ಪ್ರಾಣ ಪಣಕ್ಕಿಟ್ಟು ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸಿದ ಮಹಿಳೆ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುವಂತಿದೆ ಪ್ರಾಣ ಪಣಕ್ಕಿಟ್ಟು ರೈಲಿನ ಬಾಗಿಲಲ್ಲಿ ನಿಂತು ಪ್ರಯಾಣಿಸಿದ ಮಹಿಳೆ ವಿಡಿಯೋ…!

'Very Unsafe': Man and Woman Board Moving Overcrowded Train, Viral Video Sparks Concerns

ಭಾರತೀಯ ರೈಲುಗಳಲ್ಲಿ ಜನಸಂದಣಿಯ ಸುದ್ದಿ ಹೊಸದೇನಲ್ಲ. ಪ್ರಯಾಣಿಕರಿಂದ ತುಂಬಿ ತುಳುಕುವ ರೈಲಿನಲ್ಲಿ ಜನರು ಪ್ರಾಣಕಳೆದುಕೊಳ್ಳುವ ಭೀತಿಯಿಲ್ಲದೇ ರೈಲಿನೊಳಗೆ ಹೋಗಲು ಮುಂದಾಗುತ್ತಾರೆ. ಇಂತಹ ಇತ್ತೀಚಿನ ಘಟನೆಯೊಂದು ರೈಲ್ವೆಯಲ್ಲಿ ಪ್ರಯಾಣಿಕರ ಪ್ರಯಾಣ ಇನ್ನಷ್ಟು ಭಯಾನಕವಾಗಿದೆ ಎಂದು ಹೇಳುತ್ತದೆ.

ಇಂಟರ್ನೆಟ್ ನಲ್ಲಿ ಕಾಣಿಸಿಕೊಂಡಿರುವ ವಿಡಿಯೋವೊಂದರಲ್ಲಿ ಪುರುಷ ಮತ್ತು ಮಹಿಳಾ ಪ್ರಯಾಣಿಕರು ರೈಲಿನ ಬಾಗಿಲಿನ ಅಂಚಿನಲ್ಲಿ ಲಗೇಜ್ ಹಿಡಿದು ರೈಲನ್ನು ಹತ್ತಲು ಪ್ರಯತ್ನಿಸುತ್ತಿರುವುದನ್ನು ನೋಡಬಹುದು. ನಿಜಕ್ಕೂ ಅವರು ರೈಲಿನ ಬಾಗಿಲಿನ ತುದಿಯ ಮೇಲೂ ನಿಲ್ಲಲು ಸಾಧ್ಯವಾಗುವುದಿಲ್ಲ. ಬಾಗಿಲು ಹತ್ತಲು ಸಹಾಯಕವಾಗಿ ಇರುವ ಏಣಿಯ ಕಂಬಿಯ ಮೇಲೇ ನಿಂತು ಒದ್ದಾಡುತ್ತಾರೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ, ಜನರು ತಮ್ಮ ಕಳವಳವನ್ನು ತ್ವರಿತವಾಗಿ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಅಸುರಕ್ಷಿತವಾಗಿದೆ. ನಾವು ನಮ್ಮ ನಾಗರಿಕರಿಗೆ ಸುರಕ್ಷತೆಯ ಬಗ್ಗೆ ಶಿಕ್ಷಣ ನೀಡಬೇಕಾಗಿದೆ ಎಂದಿದ್ದಾರೆ.

ಮತ್ತೊಬ್ಬರು ರೈಲು ಹತ್ತುವ ಮೊದಲೇ ಜನ ಟಿಕೆಟ್ ಖರೀದಿಸಬೇಕು. ಟಿಕೆಟ್ ಇಲ್ಲದೆ ಪ್ರಯಾಣಿಸುವ ಜನರ ಬಗ್ಗೆ ನನಗೆ ಸಹಾನುಭೂತಿ ಇಲ್ಲ. ಆದರೆ ಅಂತವರನ್ನು ಬಂಧಿಸಿ ಅದೇ ರೀತಿ ಕೆಲಸ ಮಾಡುವವರಿಗೆ ಸಂದೇಶ ನೀಡಬೇಕು ಎಂದಿದ್ದಾರೆ. ಕೆಲವರು ಇದು ಸಾಮಾನ್ಯವಾಗಿ ಹಬ್ಬ/ಕೊಯ್ಲಿನ ಸಮಯದಲ್ಲಿ ಮತ್ತು ವಲಸೆ ಕಾರ್ಮಿಕರು/ವ್ಯಕ್ತಿಗಳು ತಮ್ಮ ಮನೆಗಳಿಗೆ ಹಿಂದಿರುಗಿದಾಗ ಸಂಭವಿಸುತ್ತದೆ ಎಂದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...