alex Certify BIG NEWS: ಕಾಂಗ್ರೆಸ್ ಹೈಕಮಾಂಡ್ ಗೆ ಸಿಎಂ ಸಿದ್ಧರಾಮಯ್ಯ ಸೆಡ್ಡು: ದೆಹಲಿಯಿಂದ ಬಂದ ನಿಗಮ –ಮಂಡಳಿ ಪಟ್ಟಿಗೆ ಸರ್ಜರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಾಂಗ್ರೆಸ್ ಹೈಕಮಾಂಡ್ ಗೆ ಸಿಎಂ ಸಿದ್ಧರಾಮಯ್ಯ ಸೆಡ್ಡು: ದೆಹಲಿಯಿಂದ ಬಂದ ನಿಗಮ –ಮಂಡಳಿ ಪಟ್ಟಿಗೆ ಸರ್ಜರಿ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೆಡ್ಡು ಹೊಡೆದಿದ್ದಾರೆ. ನಿಗಮ, ಮಂಡಳಿ ನೇಮಕಾತಿಗೆ ಸಂಬಂಧಿಸಿದಂತೆ ದೆಹಲಿಯಿಂದ ಬಂದಿದ್ದ ಕಾರ್ಯಕರ್ತರ ಪಟ್ಟಿಗೆ ಮುಖ್ಯಮಂತ್ರಿಗಳು ಸರ್ಜರಿ ಮಾಡಿದ್ದಾರೆ.

ಅಂತಿಮವಾಗಿ 34 ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ನಾಮ ನಿರ್ದೇಶನ ಮಾಡಲಾಗಿದೆ. ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆಗೆ ಸಿಎಂ ತೀರ್ಮಾನಿಸಿದ್ದಾರೆ. ದೆಹಲಿಯಿಂದ ಬಂದಿದ್ದ ಪಟ್ಟಿಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

39 ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್ ಕಳುಹಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮೂಲಕ ಪಟ್ಟಿಯನ್ನು ಎಐಸಿಸಿ ರವಾನೆ ಮಾಡಿದ್ದು, ಕಾರ್ಯಕರ್ತರ ಪಟ್ಟಿಗೆ ಸಿಎಂ, ಡಿಸಿಎಂ ಮುನಿಸಿಕೊಂಡಿದ್ದರು. 39 ಕಾರ್ಯಕರ್ತರ ಪೈಕಿ 7 ಕಾರ್ಯಕರ್ತರಿಗೆ ಕೊಕ್ ಕೊಟ್ಟು ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...