alex Certify ಆಟ ನೋಡಲು ಬಂದ ಅಜ್ಜಿಯನ್ನು ನೋಡಿ ಭಾವುಕನಾದ ಸಾಕರ್​ ಆಟಗಾರ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟ ನೋಡಲು ಬಂದ ಅಜ್ಜಿಯನ್ನು ನೋಡಿ ಭಾವುಕನಾದ ಸಾಕರ್​ ಆಟಗಾರ; ಕಣ್ಣಂಚನ್ನು ತೇವಗೊಳಿಸುತ್ತೆ ವಿಡಿಯೋ

ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ಬಾಂಧವ್ಯ ವರ್ಣನಾತೀತ. ಈ ಸಂಬಂಧ ಪದಗಳಲ್ಲಿ ಹೇಳಲಾಗುವುದಿಲ್ಲ. ಅದು ಇನ್ನಷ್ಟು ಬಲಗೊಳ್ಳುವುದು ಅಥವಾ ಪ್ರೀತಿಯ ಅರಿವಾಗುವುದು ಅವರು ದೂರ ಉಳಿದಾಗ. ಇದೀಗ ವೈರಲ್​ ಆಗಿರುವ ಅಜ್ಜಿ, ಮೊಮ್ಮಗನ ಸಂಬಂಧದ ಕುರಿತು ಬಹಳ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ವೆನೆಜುವೆಲಾದ ಫುಟ್‌ಬಾಲ್ ಆಟಗಾರನ ಘಟನೆ ಇದಾಗಿದೆ. ಪೋರ್ಚುಗಲ್‌ನಲ್ಲಿ ವೃತ್ತಿಪರವಾಗಿ ಆಡಿದ ವೆನೆಜುವೆಲಾದ ಸಾಕರ್ ಆಟಗಾರನ ಭಾವನಾತ್ಮಕ ಕ್ಷಣಗಳನ್ನು ಒಳಗೊಂಡಿರುವ ಕ್ಲಿಪ್ ಅನ್ನು ಗುಡ್ ನ್ಯೂಸ್ ಮೂವ್‌ಮೆಂಟ್ ಹಂಚಿಕೊಂಡಿದೆ.

ಈ ಆಟಗಾರ ಆಡುವ ಸಮಯದಲ್ಲಿ ದೂರದಲ್ಲಿ ಅಜ್ಜಿ ನಿಂತು ಆತನನ್ನು ಹುರಿದುಂಬಿಸುತ್ತಿರುತ್ತಾರೆ. ಅಜ್ಜಿ ಅಚಾನಕ್​ ಆಗಿ ಬಂದದ್ದನ್ನು ನೋಡಿದ ಆಟಗಾರ ಭಾವಪರವಶನಾಗಿ ಓಡೋಡಿ ಹೋಗಿ ಆಕೆಯನ್ನು ತಬ್ಬಿಕೊಳ್ಳುವ ದೃಶ್ಯ ಈ ವಿಡಿಯೋದಲ್ಲಿ ಇದೆ. ಅಜ್ಜಿಯನ್ನು ಕಂಡು ಆಟಗಾರ ಕಣ್ಣೀರಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

ಇದು ಹೃದಯಸ್ಪರ್ಶಿ ವಿಡಿಯೋ ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಬಹಳ ಸಮಯದ ನಂತರ ನಿಮ್ಮ ಪ್ರೀತಿಪಾತ್ರರನ್ನು ಭೇಟಿಯಾಗುವ ಸಂತೋಷವು ತುಂಬಾ ವಿಶೇಷವಾಗಿದೆ ಮತ್ತು ಈ ಫುಟ್ಬಾಲ್ ಆಟಗಾರನ ಪ್ರತಿಕ್ರಿಯೆಗಳ ಅದನ್ನು ತೋರಿಸುತ್ತದೆ ಎಂದು ಬಣ್ಣಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...