alex Certify ಹಳೆ ವಾಹನ ಗುಜರಿಗೆ ಹಾಕಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ: ಸಂಪುಟ ಅನುಮೋದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಳೆ ವಾಹನ ಗುಜರಿಗೆ ಹಾಕಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ: ಸಂಪುಟ ಅನುಮೋದನೆ

ಬೆಂಗಳೂರು: ಹಳೆ ವಾಹನ ಗುಜರಿಗೆ ಹಾಕಿ ಎಲೆಕ್ಟ್ರಿಕ್ ವಾಹನ ಖರೀದಿಸುವವರಿಗೆ ತೆರಿಗೆ ವಿನಾಯಿತಿ ನೀಡಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಸ್ಕೂಟರ್ ಗೆ 5000 ರೂ.ವರೆಗೆ, ಕಾರ್ ಗೆ 50,000 ರೂ. ವರೆಗೆ ವಾಹನ ತೆರಿಗೆ ವಿನಾಯಿತಿ ನೀಡಲಿದ್ದು, ಸರಕು ವಾಹನಗಳಿಗೆ ಶೇಕಡ 10 ರಷ್ಟು ತೆರಿಗೆ ವಿನಾಯಿತಿ ನೀಡಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.

ವಾಹನ ಗುಜರಿ ನೀತಿಯಂತೆ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಮಾಲೀಕರಿಗೆ ಪ್ರೇರೇಪಣೆ, ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲು ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ಪಾಲಿಸಿ ತೆರಿಗೆ ವಿನಾಯಿತಿ ಪಟ್ಟಿ ಪರಿಷ್ಕರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಂಪುಟ ಸಭೆಯ ಬಳಿಕ ಸಚಿವ ಹೆಚ್.ಕೆ. ಪಾಟೀಲ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ವಾಹನ ಸ್ಕ್ರಾಪಿಂಗ್ ಗೆ ನೀಡುವವರು ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ದ್ವಿಚಕ್ರ ವಾಹನಕ್ಕೆ 1 ಸಾವಿರದಿಂದ 5000 ರೂ.ವರೆಗೆ, 4 ಚಕ್ರದ ವಾಹನಗಳಿಗೆ 10,000 ದಿಂದ 50,000 ರೂ.ವರೆಗೆ, ಸರಕು ಸಾಗಣೆ ವಾಹನಗಳಿಗೆ ತೆರಿಗೆ ಮೊತ್ತದ ಶೇಕಡ 10ರಷ್ಟು ತೆರಿಗೆ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...