alex Certify ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಬೆಡ್ ರೂಮಿನ ಬಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಬಂಧದ ಮೇಲೆ ಪರಿಣಾಮ ಬೀರುತ್ತೆ ಬೆಡ್ ರೂಮಿನ ಬಣ್ಣ

ದೀಪಾವಳಿ ಹತ್ತಿರ ಬರ್ತಿದೆ. ಜನರು ಮನೆ ಸ್ವಚ್ಛಗೊಳಿಸೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಮನೆಗೆ ಬಣ್ಣ ಹಚ್ಚುವ ಕೆಲಸ ಕೂಡ ನಡೆಯುತ್ತಿದೆ. ಮನೆಯ ಮುಖ್ಯ ಕೋಣೆಯಲ್ಲಿ ಬೆಡ್ ರೂಮ್ ಕೂಡ ಒಂದು. ಅನೇಕರು ದಿನದ ಬಹುತೇಕ ಸಮಯವನ್ನು ಅಲ್ಲಿ ಕಳೆಯುತ್ತಾರೆ. ದಂಪತಿ ಪರಸ್ಪರ ಒಬ್ಬರನ್ನೊಬ್ಬರು ಅರಿಯುವ ಜಾಗವದು. ಬೆಡ್ ರೂಮ್ ಯಾವಾಗ್ಲೂ ವಾಸ್ತು ಪ್ರಕಾರ ಇರಬೇಕು ಎನ್ನಲಾಗುತ್ತದೆ. ಬರೀ ದಿಕ್ಕು ಮಾತ್ರವಲ್ಲ ಬೆಡ್ ರೂಮಿನಲ್ಲಿರುವ ಬೆಡ್ ಶೀಟ್, ಹಾಸಿಗೆ, ನೀರು, ಎಲೆಕ್ಟ್ರಿಕ್ ವಸ್ತು ಎಲ್ಲವೂ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ಬೆಡ್ ರೂಮಿನ ಗೋಡೆಗೆ ಬಳಿಯುವ ಬಣ್ಣ ಕೂಡ ಮಹತ್ವ ಪಡೆಯುತ್ತದೆ. ದೀಪಾವಳಿಯಲ್ಲಿ ಬೆಡ್ ರೂಮಿಗೆ ಬಣ್ಣ ಹಚ್ಚುತ್ತಿದ್ದರೆ, ಪರದೆ ಹಾಕ್ತಿದ್ದರೆ ವಾಸ್ತು ಪ್ರಕಾರ ಯಾವ ಬಣ್ಣ ಬೆಸ್ಟ್ ಎಂಬುದನ್ನು ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ, ಬೆಡ್ ರೂಮ್ ಪರದೆಗಳ ಬಣ್ಣವನ್ನು ನೀವು ಗಮನಿಸಿ. ಮಲಗುವ ಕೋಣೆಯಲ್ಲಿ ನೀವು ತಿಳಿ ಬಣ್ಣದ ಪರದೆಗಳನ್ನು ಹಾಕಬೇಕು. ನೀವು ಕೋಣೆಯಲ್ಲಿ ಬಿಳಿ, ಕಿತ್ತಳೆ, ಕೆನೆ, ಗುಲಾಬಿ, ಹಳದಿ ಪರದೆಗಳನ್ನು ಸಹ ಬಳಸಬಹುದು. ನಿಮ್ಮ ಕಿಟಕಿಯು ಮನೆಯ ಉತ್ತರ ದಿಕ್ಕಿನಲ್ಲಿದ್ದರೆ ಆಕಾಶ ಅಥವಾ ಬಿಳಿ ಬಣ್ಣದ ಪರದೆಗಳನ್ನು ಹಾಕಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯ ಗೋಡೆಗಳ ಬಣ್ಣಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಮಲಗುವ ಕೋಣೆಯಲ್ಲಿ ತಿಳಿ ಬಣ್ಣ ಬಳಸಬಹುದು. ತಿಳಿ ಹಸಿರು, ಗುಲಾಬಿ, ಆಕಾಶದಂತಹ ಬಣ್ಣಗಳನ್ನು ಹಚ್ಚಬಹುದು.

ಮನೆಯಲ್ಲಿರುವ ಬೆಡ್‌ಶೀಟ್‌ಗಳ ಬಣ್ಣದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು. ಬೆಡ್‌ಶೀಟ್‌ಗಳು ವ್ಯಕ್ತಿಯ ನಡವಳಿಕೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ. ಬೆಡ್ ರೂಮಿನಲ್ಲಿ ನೀವು ಗುಲಾಬಿ ಬಣ್ಣದ ಬೆಡ್‌ಶೀಟ್‌ಗಳನ್ನು ಬಳಸಬಹುದು. ಗುಲಾಬಿ ಬಣ್ಣವನ್ನು ಹೊರತುಪಡಿಸಿ ನೀವು ಮನೆಯಲ್ಲಿ ತಿಳಿ ಹಳದಿ, ಕಿತ್ತಳೆ, ಆಕಾಶ ನೀಲಿ ಬಣ್ಣಗಳನ್ನು ಸಹ ಬಳಸಬಹುದು. ನೇರಳೆ ಬಣ್ಣದ ಬೆಡ್‌ಶೀಟ್‌ ಬಳಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...