alex Certify ಜನವರಿ 16 ರಿಂದ ಲಸಿಕೆ ನೀಡಲು ಇದೇ ಕಾರಣ: ವ್ಯಾಕ್ಸಿನ್ ಬಗ್ಗೆ ಕೇಂದ್ರ ಸಚಿವ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 16 ರಿಂದ ಲಸಿಕೆ ನೀಡಲು ಇದೇ ಕಾರಣ: ವ್ಯಾಕ್ಸಿನ್ ಬಗ್ಗೆ ಕೇಂದ್ರ ಸಚಿವ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಜನವರಿ 16 ರಿಂದ ಕೊರೋನಾ ಲಸಿಕೆ ನೀಡಲಿದ್ದು, ಈಗಾಗಲೇ ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಅಂದ ಹಾಗೆ, ಜನವರಿ 16 ರಿಂದಲೇ ಲಸಿಕೆ ಹಂಚಿಕೆಗೆ ಚಾಲನೆ ನೀಡಲು ಹಬ್ಬಗಳು ಕಾರಣವೆನ್ನಲಾಗಿದೆ.

ಜನವರಿ 14 ಮತ್ತು 15 ರಂದು ದೇಶದಲ್ಲಿ ಹಬ್ಬಗಳು ಇರುತ್ತವೆ. ಸಂಕ್ರಾಂತಿ, ಪೊಂಗಲ್ ಮೊದಲಾದ ಹಬ್ಬಗಳು ಇರುವುದರಿಂದ ಜನವರಿ 14 ಮತ್ತು 15 ರ ಬದಲಿಗೆ 16 ರಿಂದ ಲಸಿಕೆ ನೀಡಿಕೆ ಆರಂಭಿಸಲು ನಿರ್ಧರಿಸಲಾಗಿದೆ.

ಭಾರತದ ಲಸಿಕೆ ಅಗ್ಗ, ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಭಾರತ ಅಗ್ಗದ ಲಸಿಕೆಯನ್ನು ಇಡೀ ವಿಶ್ವಕ್ಕೆ ಸಿಗುವಂತೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.

ಹಬ್ಬಗಳು ಇರುವುದರಿಂದ ಜನವರಿ 16 ರಿಂದ ದೇಶದಲ್ಲಿ ಲಸಿಕೆ ನೀಡಲಾಗುವುದು. ಮೊದಲ ಕೇಸ್ ಪತ್ತೆಯಾಗಿ ವರ್ಷ ತುಂಬುವ ಮೊದಲೇ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...