alex Certify ಮನೆ ಹೊಂದುವ ಕನಸು ಕಂಡ ಬಡವರಿಗೆ ಭರ್ಜರಿ ಸುದ್ದಿ, 3.30 ಲಕ್ಷ ಮನೆ ಹಕ್ಕುಪತ್ರ ನೀಡಿಕೆ -ನೋಂದಣಿಗೆ 1 ಸಾವಿರ ರೂ. ಶುಲ್ಕ ನಿಗದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಹೊಂದುವ ಕನಸು ಕಂಡ ಬಡವರಿಗೆ ಭರ್ಜರಿ ಸುದ್ದಿ, 3.30 ಲಕ್ಷ ಮನೆ ಹಕ್ಕುಪತ್ರ ನೀಡಿಕೆ -ನೋಂದಣಿಗೆ 1 ಸಾವಿರ ರೂ. ಶುಲ್ಕ ನಿಗದಿ

ಮೈಸೂರು: ಬಡವರಿಗೆ 3.30 ಲಕ್ಷ ಮನೆ ವಿತರಿಸಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಡವರಿಗಾಗಿ 3.30 ಲಕ್ಷ ಮನೆಗಳನ್ನು ನಿರ್ಮಿಸಿ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಮನೆ ನಿರ್ಮಿಸಿ ಹಕ್ಕುಪತ್ರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿರುವುದಾಗಿ ಮಾಹಿತಿ ನೀಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮನೆಗಳ ನೋಂದಣಿಗೆ 1000 ರೂ. ನಿಗದಿ ಮಾಡಲಾಗುವುದು. ಇತರೆ ಸಮುದಾಯದವರಿಗೆ ಮನೆಗಳ ನೋಂದಣಿಗೆ 2000 ರೂ. ಶುಲ್ಕ ನಿಗದಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...