alex Certify ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಮನದಿ ಸ್ಪೋಟದಿಂದ ಭಾರೀ ಅನಾಹುತ: 153 ಜನ ನಾಪತ್ತೆಯಾಗಿರುವ ಮಾಹಿತಿ ಲಭ್ಯ – ಮುಂದುವರೆದ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡ್ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಸುಮಾರು 153 ಜನರು ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ರೈನಿ ಪವರ್ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡುತ್ತಿದ್ದ 32 ಜನ ನಾಪತ್ತೆಯಾಗಿದ್ದಾರೆ. ತಪೋವನ ಸಮೀಪದ ಸಣ್ಣ ಸುರಂಗದಲ್ಲಿ 12 ಜನರನ್ನು ರಕ್ಷಿಸಲಾಗಿದೆ. ದೊಡ್ಡ ಸುರಂಗದಲ್ಲಿ ಸುಮಾರು 30 ಜನ ಸಿಲುಕಿರುವ ಶಂಕೆ ಇದ್ದು ಐಟಿಬಿಪಿ, ವಾಯುಸೇನೆ, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್. ನಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಚಮೋಲಿ ಜಿಲ್ಲೆ ಜೋಶಿಮಠದ ಬಳಿ ಹಿಮನದಿ ಸ್ಪೋಟಗೊಂಡ ಪರಿಣಾಮ ದಿಢೀರ್ ಪ್ರವಾಹ ಉಂಟಾಗಿ 153 ಮಂದಿ ಕಣ್ಮರೆಯಾಗಿದ್ದಾರೆ. ದೌಲಿಗಂಗಾ ಜಲವಿದ್ಯುತ್ ಘಟಕ ಹಾನಿಗೀಡಾಗಿದ್ದು, ರೈನಿ ಗ್ರಾಮದ ಬಳಿ ನಿರ್ಮಾಣ ಹಂತದ ಅಣೆಕಟ್ಟು ಕೊಚ್ಚಿಹೋಗಿದೆ. ನದಿ ತೀರದ ವಾಸಿಗಳಿಗೂ ತೊಂದರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...