ಉತ್ತರಾಖಂಡ್ನ ಭಾಗೇಶ್ವರ ಜಿಲ್ಲೆಯ ಕಾಪ್ಕೋಟ್ ಸುಂದರದುಂಗಾದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದವರ ಪೈಕಿ ಐವರ ಮೃತದೇಹವನ್ನು ಎಸ್ಡಿಆರ್ಎಫ್ ಸಿಬ್ಬಂದಿ ಹೊರತೆಗೆದಿದ್ದಾರೆ. ಇವರು ನಾಪತ್ತೆಯಾಗಿದ್ದ 6 ಚಾರಣಿಗರ ತಂಡದ ಸದಸ್ಯರು ಎಂದು ತಿಳಿದು ಬಂದಿದೆ.
ಪ್ರಕರಣ ಸಂಬಂಧ ಹೆಚ್ಚಿನ ವಿವರಣೆ ನೀಡಿದ ಎಸ್ಡಿಆರ್ ಪಡೆ, ಬಾಗೇಶ್ವರ ಜಿಲ್ಲೆಯ ಕಾಪ್ಕೋಟ್ನ ಸುಂದರದುಂಗಾ ಚಾರಣ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಆರು ಮಂದಿ ಚಾರಣಿಗರಿಗೆ ಶೋಧ ಕಾರ್ಯ ನಡೆಸಲಾಗಿತ್ತು. ಇದರಲ್ಲಿ ಐವರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳನ್ನು ಕಾಪ್ಕೋಟ್ಗೆ ತರಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಹೇಳಿದೆ.
ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ
ಇನ್ನು ಈ ವಿಚಾರವಾಗಿ ಮಾತನಾಡಿದ ಬಾಗೇಶ್ವರ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿನೀತ್ ಕುಮಾರ್, 13 ಮಂದಿ ಸದಸ್ಯರನ್ನು ಒಳಗೊಂಡ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಪಡೆಯು ಸುಂದರದುಂಗಾ ಹಿಮನದಿ ಬಳಿಯ ದೇವಿಕುಂಡ್ನಲ್ಲಿ ಕಾರ್ಯಾಚರಣೆ ಆರಂಭಿಸಿತು. ಕಾರ್ಯಾಚರಣೆಯ ವೇಳೆ ಐವರು ಚಾರಣಿಗರ ಮೃತದೇಹ ಪತ್ತೆಯಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ಉತ್ತರಾಖಂಡ್ನಲ್ಲಿ ಅಕ್ಟೋಬರ್ 17 ರಿಂದ 19ರವರೆಗೆ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿದ್ದು ಈ ವೇಳೆ ಸುಂದರದುಂಗಾ ಹಿಮನದಿಯ ಬಳಿ ಈ ಐವರು ಮೃತ ಚಾರಣಿಗರು ಸೇರಿದಂತೆ 65 ಮಂದಿ ಸಿಲುಕಿಕೊಂಡಿದ್ದರು ಎನ್ನಲಾಗಿದೆ. ಬಾಗೇಶ್ವರದ ಕಾಪ್ಕೋಟ್ ಉಪವಿಭಾಗದ ಜಕುನಿ ಗ್ರಾಮದ ನಿವಾಸಿಯಾಗಿರುವ ಗೈಡ್ ಖಿಲಾಫ್ ಸಿಂಗ್ಗಾಗಿ ಶೋಧ ಕಾರ್ಯ ಮುಂದುವರಿದಿದೆ.