alex Certify ಗೆಳತಿ ಮದುವೆಯಾಗಲು ಲಿಂಗ ಬದಲಿಸಿಕೊಳ್ಳಲು ಮುಂದಾದ ಯುವತಿಯ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳತಿ ಮದುವೆಯಾಗಲು ಲಿಂಗ ಬದಲಿಸಿಕೊಳ್ಳಲು ಮುಂದಾದ ಯುವತಿಯ ಬರ್ಬರ ಹತ್ಯೆ

ಉತ್ತರ ಪ್ರದೇಶದ ಶಹಜಹಾನಾಬಾದ್ ಜಿಲ್ಲೆಯಲ್ಲಿ ಯುವತಿಯೊಬ್ಬಳಿಗೆ ತನ್ನ ಲೆಸ್ಬಿಯನ್ ಪ್ರೇಮಿಯನ್ನು ಮದುವೆಯಾಗಲು ಲಿಂಗವನ್ನು ಬದಲಾಯಿಸುವುದಾಗಿ ಭರವಸೆ ನೀಡಿ ನಂತರ ಆಕೆಯನ್ನ ತಂತ್ರಿಯೊಬ್ಬ ಹತ್ಯೆ ಮಾಡಿದ್ದು ಮೃತಳನ್ನ ಆರ್‌ಸಿ ಮಿಷನ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಪೂನಂ ಎಂದು ಗುರುತಿಸಲಾಗಿದೆ.

ಆಕೆ ಪುವಾಯನ್ ನಿವಾಸಿ ಪ್ರೀತಿ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿದ್ದಳು. ನಂತರ ಇಬ್ಬರೂ ಸಲಿಂಗ ಸಂಬಂಧ ಹೊಂದಿದ್ದರು. ಪೂನಂ ಜೊತೆಗಿನ ಸಂಬಂಧ ಬೆಳಕಿಗೆ ಬಂದ ನಂತರ ಪ್ರೀತಿಗೆ ಮದುವೆಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೀತಿ ಮತ್ತು ಆಕೆಯ ತಾಯಿ ಊರ್ಮಿಳಾ, ತಂತ್ರಿ ರಾಮ್ ನಿವಾಸ್ ಅವರನ್ನು ಭೇಟಿಯಾಗಿ ಪೂನಂಳನ್ನು ಕೊಲ್ಲಲು ಯೋಜನೆ ರೂಪಿಸಿದ್ದರು. ಪೂನಂ ಪುರುಷನಾಗಲು ಬಯಸಿರುವುದಾಗಿ ಪ್ರೀತಿ, ತಂತ್ರಿಗಳಿಗೆ ತಿಳಿಸಿದ್ದಳು. ಇದರ ಲಾಭ ಪಡೆದ ಪ್ರೀತಿಯ ತಾಯಿ ಪೂನಂಳನ್ನು ಕೊಲ್ಲಲು 1.5 ಲಕ್ಷ ರೂಪಾಯಿ ನೀಡುವುದಾಗಿ ತಂತ್ರಿಗಳಿಗೆ ಭರವಸೆ ನೀಡಿದ್ದಳು ಎನ್ನಲಾಗಿದೆ. ತಂತ್ರಿಗಳಿಗೆ ಮುಂಗಡವಾಗಿ 5,000 ರೂ.ಗಳನ್ನು ನೀಡಿದ್ದು, ಪೂನಂಳನ್ನು ಕೊಂದ ನಂತರ ಉಳಿದ ಮೊತ್ತವನ್ನು ನೀಡುವುದಾಗಿ ಹೇಳಿದ್ದಳು.

ಯೋಜನೆಯ ಪ್ರಕಾರ, ಪ್ರೀತಿ, ಪೂನಂಗೆ ಕರೆ ಮಾಡಿ ತಂತ್ರಿ ನಿನ್ನ ಲಿಂಗವನ್ನು ಬದಲಾಯಿಸುತ್ತಾನೆ ಎಂದು ನಂಬುವಂತೆ ಮಾಡಿದಳು. ಪೂನಂ ಏಪ್ರಿಲ್ 18 ರಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಬಳಿಕ ಆಕೆಯ ಸಹೋದರ ಏಪ್ರಿಲ್ 26 ರಂದು ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.

ಪೂನಂ, ಪ್ರೀತಿ ಮತ್ತು ರಾಮ್ ನಿವಾಸ್ ಜೊತೆ ಮಾತನಾಡಿರುವುದು ಫೋನ್‌ ಕಾಲ್‌ ರೆಕಾರ್ಡರ್ ಮೂಲಕ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಆಧರಿಸಿ ಪೊಲೀಸರು ರಾಮನಿವಾಸ್‌ನನ್ನು ವಶಕ್ಕೆ ಪಡೆದರು. ಪೊಲೀಸರ ವಿಚಾರಣೆ ವೇಳೆ ಆತ ತಪ್ಪೊಪ್ಪಿಕೊಂಡಿದ್ದಾನೆ. ಪೂನಂ ಅವರನ್ನು ಪುರುಷನನ್ನಾಗಿ ಪರಿವರ್ತಿಸುವ ನೆಪದಲ್ಲಿ ಕಾಡಿಗೆ ಕರೆದೊಯ್ದು ನದಿಯ ದಡದಲ್ಲಿ ಕಣ್ಣು ಮುಚ್ಚಿ ಮಲಗುವಂತೆ ಹೇಳಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದೇ ವೇಳೆ ಸುತ್ತಿಗೆಯಿಂದ ಪೂನಂ ಕುತ್ತಿಗೆ ಸೀಳಿದ್ದಾನೆ. ಬಳಿಕ ತಂತ್ರಿ ಪೂನಂ ದೇಹವನ್ನು ಪೊದೆಗಳಲ್ಲಿ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಆರೋಪಿ ತಂತ್ರಿ ಮತ್ತು ಪೂನಂ ಸ್ನೇಹಿತೆ ಪ್ರೀತಿಯನ್ನು ಮಂಗಳವಾರ ಬಂಧಿಸಲಾಗಿದ್ದು, ಇಬ್ಬರನ್ನೂ ಜೈಲಿಗೆ ಕಳುಹಿಸಲಾಗಿದೆ. ಪ್ರೀತಿಯ ತಾಯಿ ಊರ್ಮಿಳಾಗಾಗಿ ಹುಡುಕಾಟ ನಡೆಯುತ್ತಿದೆ. ಹತ್ಯೆಗೆ ಬಳಸಿದ ಸುತ್ತಿಗೆಯನ್ನು ಕೂಡ ಪೊಲೀಸರು ತಂತ್ರಿ ಮನೆಯಿಂದ ವಶಪಡಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...