alex Certify ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಬಳಸಿ ‘ಟೂತ್ ಪೇಸ್ಟ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೆಗ್ನೆನ್ಸಿ ಟೆಸ್ಟ್ ಮಾಡಲು ಬಳಸಿ ‘ಟೂತ್ ಪೇಸ್ಟ್’

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಜೀವನದಲ್ಲಿ ಅತ್ಯಂತ ಖುಷಿ ನೀಡುವ ವಿಚಾರ.

ಹೊಟ್ಟೆಯೊಳಗೆ ಇನ್ನೊಂದು ಜೀವ ಬೆಳೆಯುತ್ತಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಮಾರುಕಟ್ಟೆಗೆ ಈಗ ಅನೇಕ ಉಪಕರಣಗಳು ಬಂದಿವೆ. ಪ್ರೆಗ್ನೆನ್ಸಿ ಟೆಸ್ಟ್ ಕಿಟ್ ನಿಂದ ಸುಲಭವಾಗಿ ತಾಯಿಯಾಗುತ್ತಿರುವ ಖುಷಿ ಸುದ್ದಿಯನ್ನು ಪಡೆಯಬಹುದಾಗಿದೆ. ಆದ್ರೆ ಮಾರುಕಟ್ಟೆಗೆ ಹೋಗದೆ ಮನೆಯಲ್ಲಿರುವ ವಸ್ತುವಿನಿಂದ  ನೀವು ತಾಯಿಯಾಗ್ತಿದ್ದೀರಾ ಎಂಬುದನ್ನು ತಿಳಿಯಬಹುದು.

ಟೂತ್ ಪೇಸ್ಟ್ ನಿಂದ ಇದು ಸಾಧ್ಯ ಎಂದ್ರೆ ನೀವು ನಂಬಲೇಬೇಕು. ಎಲ್ಲರ ಮನೆಯಲ್ಲಿಯೂ ಟೂತ್ ಪೇಸ್ಟ್ ಇದ್ದೇ ಇರುತ್ತದೆ. ಗರ್ಭಿಣಿ ಎಂಬ ಸ್ವಲ್ಪ ಸಂದೇಶ ನಿಮಗೆ ಶುರುವಾದಾಗ ನೀವು ಟೂತ್ ಪೇಸ್ಟ್ ಮೂಲಕ ಟೆಸ್ಟ್ ಮಾಡಿಕೊಳ್ಳಬಹುದು.

ಯೂಸ್ ಎಂಡ್ ಥ್ರೂ ಗ್ಲಾಸ್, ಬಿಳಿ ಬಣ್ಣದ ಟೂತ್ ಪೇಸ್ಟ್ ಹಾಗೂ ಬೆಳಗಿನ ಯೂರಿನ್ ಮೂಲಕ ಇದನ್ನು ಪರೀಕ್ಷೆ ಮಾಡಿಕೊಳ್ಳಬಹುದು. ಮೊದಲು ಒಂದು ಗ್ಲಾಸ್ ತೆಗೆದುಕೊಂಡು ಅದರಲ್ಲಿ ಯೂರಿನ್ ಹಾಕಿ. ನಂತ್ರ ಅದಕ್ಕೆ ಒಂದು ಚಮಚ ಟೂತ್ ಪೇಸ್ಟ್ ಹಾಕಿ. ಆಗ ಯೂರಿನ್ ಬಣ್ಣ ನೀಲಿಗೆ ತಿರುಗಿದ್ರೆ ನೀವು ಮನೆಯವರಿಗೆ ಖುಷಿ ಸುದ್ದಿ ನೀಡಬಹುದು.

ಟೂತ್ ಪೇಸ್ಟ್ ಟೆಸ್ಟ್ ನಲ್ಲಿಯೂ ಕೆಲವೊಂದು ನ್ಯೂನ್ಯತೆಗಳಿವೆ. ಎಷ್ಟು ಮಾತ್ರದ ಯೂರಿನ್ ಹಾಕಬೇಕು ಎಂಬುದರ ಸರಿಯಾದ ಅಳತೆಯಿಲ್ಲ. ಜೊತೆಗೆ ಸ್ವಲ್ಪ ಸಮಯ ಹಾಗೆಯೇ ಇಟ್ಟರೆ ಅದು ಸಾಮಾನ್ಯವಾಗಿ ಬಣ್ಣ ಬದಲಾಯಿಸುತ್ತದೆ. ಇದರಿಂದಾಗಿ ಗೊಂದಲ ಸೃಷ್ಟಿಯಾಗಬಹುದು. ಹಾಗಾಗಿ ಬೆಳಗಿನ ಮೊದಲ ಮೂತ್ರದಲ್ಲಿ ಪರೀಕ್ಷೆ ಮಾಡಬೇಕು. ಎರಡು ಮೂರು ಬಾರಿ ಹೀಗೆ ಮಾಡಿದ್ರೆ ಸ್ಪಷ್ಟ ಚಿತ್ರಣ ಸಿಗುವುದರಲ್ಲಿ ಸಂಶಯವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...