alex Certify ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼದಾಸವಾಳʼ ಗಿಡಕ್ಕೆ ಹುಳು ಬಂದಿದ್ರೆ ನಿವಾರಿಸಲು ಈ ತಂತ್ರ ಬಳಸಿ

ದಾಸವಾಳ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡುಬರುತ್ತದೆ. ದಾಸವಾಳ ತುಂಬಾ ಬೇಗನೆ ಬೆಳೆದು ಹೂಬಿಡುವಂತಹ ಸಸ್ಯವಾಗಿದೆ. ಆದರೆ ಇದನ್ನು ಸರಿಯಾಗಿ ನೋಡಿಕೊಳ್ಳಬೇಕು. ಇಲ್ಲವಾದರೆ ಅದಕ್ಕೆ ಬಿಳಿ ಹುಳುಗಳು ಹಿಡಿದು ಗಿಡ ಹಾಳಾಗುತ್ತದೆ. ಹಾಗಾಗಿ ಈ ಹುಳುಗಳನ್ನು ನಿವಾರಿಸಲು ಈ ತಂತ್ರ ಬಳಸಿ.

ದಾಸವಾಳದಲ್ಲಿ ಗಿಡದಲ್ಲಿ ಹಿಡಿದ ಬಿಳಿ ಹುಳುಗಳನ್ನು ನಿವಾರಿಸಲು ಬೇವಿನ ಎಣ್ಣೆ ಸಹಕಾರಿಯಾಗಿದೆ. ಅದಕ್ಕಾಗಿ 1 ಚಿಟಿಕೆ ಅಡುಗೆ ಸೋಡಾ, 1 ಚಮಚ ಶಾಂಪೂ ಮತ್ತು 2-3 ಹನಿ ಬೇವಿನೆಣ್ಣೆಯನ್ನು 1 ಲೋಟ ನೀರಿನಲ್ಲಿ ಬೆರೆಸಿ ಸಸ್ಯಗಳ ಮೇಲೆ ಸಿಂಪಡಿಸಿ. ಇದನ್ನು ದಿನಕ್ಕೆ 2 ಬಾರಿಯಾದರೂ ಮಾಡಿ. 3-4 ದಿನಗಳಲ್ಲಿ ಹುಳುಗಳು ನಾಶವಾಗುತ್ತವೆ.

ದಾಸವಾಳ ಗಿಡದಲ್ಲಿರುವ ಬಿಳಿ ಹುಳುಗಳನ್ನು ತೆಗೆಯಲು ಸೋಪ್ ವಾಟರ್ ಬಳಸಿ. ಸ್ಪ್ರೇ ಬಾಟಲಿನಲ್ಲಿ ಕಾಲುಭಾಗ ನೀರನ್ನು ಹಾಕಿ ಅದಕ್ಕೆ 4 ಚಮಚ ಡಿಟರ್ಜೆಂಟ್ ಸೇರಿಸಿ. ಇದನ್ನು ಮಿಕ್ಸ್ ಮಾಡಿ ಸಸ್ಯಗಳಿಗೆ ಸಿಂಪಡಿಸಿ. ಇದನ್ನು 4-5 ಬಾರಿ ಬಳಸಿದ ಬಳಿಕ ಹುಳು ಸಾಯುತ್ತದೆ.

ಹಾಗೇ ದಾಸವಾಳ ಗಿಡದಲ್ಲಿ ಹಿಡಿದ ಹುಳುಗಳನ್ನು ತೆಗೆದುಹಾಕಲು ತುಂಬಾ ಸುಲಭವಾದ ಮಾರ್ಗವೆಂದರೆ ತುಂಬಾ ವೇಗವಾಗಿ ಒತ್ತಡದಿಂದ ನೀರನ್ನು ಹಾಕುವುದು. ಹೀಗೆ ಮಾಡುವುದರಿಂದ ಹುಳಗಳನ್ನು ಗಿಡದಿಂದ ಬೇರ್ಪಡಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...