alex Certify H-1B ಸೇರಿ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ ಮಾಡಿದ ಅಮೆರಿಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

H-1B ಸೇರಿ ವೀಸಾ ಶುಲ್ಕ ಶೇ. 12ರಷ್ಟು ಹೆಚ್ಚಳ ಮಾಡಿದ ಅಮೆರಿಕ

ವಾಷಿಂಗ್ಟನ್: ಹೆಚ್-1ಬಿ ಸೇರಿದಂತೆ ಕೆಲವು ವೀಸಾಗಳ ಸಂಸ್ಕರಣೆ ಶುಲ್ಕಗಳನ್ನು ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ ಏರಿಕೆ ಮಾಡಿದೆ.

ಸಂಸ್ಕರಣೆ ಶುಲ್ಕ ಮಾರ್ಚ್ ನಿಂದ ಹೆಚ್-1ಬಿ ವೀಸಾಗಳಿಗೆ ಸಲ್ಲಿಸಲಾಗುವ ಅರ್ಜಿಗಳ ಇ- ನೋಂದಣಿಯನ್ನು ಒಳಗೊಂಡಿರುತ್ತದೆ. ವಲಸೆಯೇತರ ಕಾರ್ಮಿಕರಿಗೆ ಬಳಸುವ ಹೆಚ್1 ಬಿ ಅಥವಾ ಎಲ್ 1 ವೀಸಾಗಳ ಅರ್ಜಿ ನಮೂನೆ ಐ-129ರ ಸಂಸ್ಕರಣೆ ಶುಲ್ಕವನ್ನು ಶೇಕಡ 12ರಷ್ಟು ಹೆಚ್ಚಳ ಮಾಡಲಾಗಿದ್ದು, 2805 ಡಾಲರ್ ಆಗಲಿದೆ. 2024ರ ಫೆಬ್ರವರಿ 26 ರಿಂದ ಹೊಸ ಶುಲ್ಕ ಜಾರಿಗೆ ಬರಲಿದೆ.

US ಪೌರತ್ವ ಮತ್ತು ವಲಸೆ ಸೇವೆಗಳು(USCIS) H-1B ಅಪ್ಲಿಕೇಶನ್‌ಗಳು ಸೇರಿದಂತೆ ಕೆಲವು ವಿಭಾಗಗಳಲ್ಲಿ ಪ್ರೀಮಿಯಂ ಪ್ರಕ್ರಿಯೆ ಶುಲ್ಕವನ್ನು ಹೆಚ್ಚಿಸುವ ಅಂತಿಮ ನಿಯಮವನ್ನು ಪ್ರಕಟಿಸಿದೆ. ಶುಲ್ಕ ಬದಲಾವಣೆಯು ಫೆಬ್ರವರಿ 26, 2024 ರಿಂದ ಜಾರಿಗೆ ಬರಲಿದೆ. ಫಾರ್ಮ್ I-129 ರ ಪ್ರೀಮಿಯಂ ಪ್ರಕ್ರಿಯೆಗೆ ಶುಲ್ಕಗಳು(ಇದು H-1B ವೀಸಾ ಅಥವಾ L1 – ಇಂಟರ್‌ಕಂಪನಿ ವರ್ಗಾವಣೆ ವೀಸಾಗಳಂತಹ ವಲಸೆ-ಅಲ್ಲದ ಕೆಲಸಗಾರರಿಗೆ ಅರ್ಜಿಯಾಗಿದೆ) USD 2,805 ಗೆ ಅಂದರೆ 12% ಹೆಚ್ಚಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...