alex Certify ಭೀಕರ ಅಪಘಾತವಾದ್ರೂ ಪವಾಡಸದೃಶ ರೀತಿಯಲ್ಲಿ ಪಾರಾದ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭೀಕರ ಅಪಘಾತವಾದ್ರೂ ಪವಾಡಸದೃಶ ರೀತಿಯಲ್ಲಿ ಪಾರಾದ ಮಹಿಳೆ..!

ವಾಷಿಂಗ್ಟನ್: ಕಾರಿನ ಮೇಲೆ ಸೆಮಿ ಟ್ರಕ್ ಹರಿದ ಪರಿಣಾಮ ವಾಹನವು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಮಹಿಳಾ ಕಾರು ಚಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಅಮೆರಿಕಾದ ವಾಷಿಂಗ್ಟನ್ ನಲ್ಲಿ ಈ ಘಟನೆ ಸಂಭವಿಸಿದೆ.

46 ವರ್ಷದ ಮಹಿಳೆ ತನ್ನ ನಿಸ್ಸಾನ್ ಅಲ್ಟಿಮಾ ತನ್ನ ಕಾರನ್ನು ಚಲಾಯಿಸುತ್ತಿದ್ದಳು. ಮಂಗಳವಾರ ಬೆಳಿಗ್ಗೆ ಮೌಂಟ್ ವೆರ್ನಾನ್‌ನಲ್ಲಿರುವ ಸ್ಕಗಿಟ್ ನದಿ ಸೇತುವೆಯ ಮೇಲೆ ವಾಹನಗಳು ನಿಧಾನವಾಗಿ ಚಲಿಸುತ್ತಿದ್ದವು. ಆದರೆ ವೇಗವಾಗಿ ಬಂದ ಟ್ರಕ್ ನಿಧಾನವಾಗಿ ಚಲಿಸಲು ಸಾಧ್ಯವಾಗದೆ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನ ಮೇಲೆ ಟ್ರಕ್ ನಿಂತಿದೆ.

ಸ್ಟೇಟ್ ಟ್ರೂಪರ್ ರಾಕಿ ಒಲಿಫ್ಯಾಂಟ್ ಎಂಬುವವರು ಟ್ವಿಟ್ಟರ್‌ನಲ್ಲಿ ಭೀಕರ ಅಪಘಾತದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಭೀಕರ ಅಪಘಾತವಾದರೂ ಕೂಡ ಮಹಿಳಾ ಚಾಲಕಿ ಸಣ್ಣ-ಪುಟ್ಟ ಗಾಯಗಳೊಂದಿಗೆ ಪಾರಾಗಿರುವುದು ನಿಜಕ್ಕೂ ಅದ್ಭುತ.  ಒಲಿಫಾಂಟ್ ತನ್ನ 14 ವರ್ಷಗಳ ವೃತ್ತಿಜೀವನದಲ್ಲಿ ಈ ತರಹ ಆಗಿದ್ದನ್ನು ನೋಡಿಲ್ಲ ಎಂಬುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...