alex Certify ಬರೋಬ್ಬರಿ 1 ವರ್ಷಗಳ ಕಾಲ ಮಕ್ಕಳ ಶವವನ್ನು ಕಾರಿನಲ್ಲೇ ಇಟ್ಟಿದ್ದ ಮಹಿಳೆ ಅಂದರ್..​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 1 ವರ್ಷಗಳ ಕಾಲ ಮಕ್ಕಳ ಶವವನ್ನು ಕಾರಿನಲ್ಲೇ ಇಟ್ಟಿದ್ದ ಮಹಿಳೆ ಅಂದರ್..​..!

ಕಾರಿನಲ್ಲಿ ಇಬ್ಬರು ಮಕ್ಕಳ ಮೃತದೇಹವನ್ನು ಇಟ್ಟುಕೊಂಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು ಶವಗಳನ್ನು ವಶಕ್ಕೆ ಪಡೆಯಲಾಗಿದೆ. ಅಮೆರಿಕದಲ್ಲಿ ನಡೆದ ಘಟನೆ ಇದಾಗಿದ್ದು ಈ ಇಬ್ಬರು ಮಕ್ಕಳು ಆರೋಪಿ ಮಹಿಳೆಯ ಸೋದರಳಿಯ ಹಾಗೂ ಸೊಸೆ ಆಗಿದ್ದರು ಎಂದು ವರದಿಯಾಗಿದೆ.

ಬಾಲ್ಟಿಮೋರ್​ ನಿವಾಸಿಯಾದ ನಿಕೋಲೆ ಜಾನ್ಸನ್​ ವಿರುದ್ಧ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಬಾಲಕಿ 7 ವರ್ಷ ವಯಸ್ಸಿನವಳಾಗಿದ್ದರೆ ಬಾಲಕ 5 ವರ್ಷ ಪ್ರಾಯದವನಾಗಿದ್ದ ಎನ್ನಲಾಗಿದೆ.

ಕಳೆದ ವರ್ಷ ಮೇ ತಿಂಗಳಲ್ಲಿ ಇಬ್ಬರು ಮಕ್ಕಳನ್ನ ಕೊಲೆ ಮಾಡಿದ್ದ ಈಕೆ ಅವರ ದೇಹವನ್ನು ಸೂಟ್​ಕೇಸ್​ನಲ್ಲಿ ಹಾಕಿ ಕಾರಿನಲ್ಲಿ ಇರಿಸಿದ್ದಳು. ಅಲ್ಲದೇ ಈ ಕಾರನ್ನು ಸಾಮಾನ್ಯ ರೀತಿಯಲ್ಲೇ ಬಳಕೆ ಮಾಡುತ್ತಿದ್ದಳು. ಒಂದು ವರ್ಷದ ಬಳಿಕ ಈ ಎರಡು ದೇಹವನ್ನು ಪ್ಲಾಸ್ಟಿಕ್​ ಬ್ಯಾಗ್​ನಲ್ಲಿ ಹಾಕಿ ಇರಿಸಿದ್ದಳು ಎನ್ನಲಾಗಿದೆ . ವೇಗವಾಗಿ ಕಾರನ್ನು ಓಡಿಸಿದ್ದ ಕಾರಣಕ್ಕೆ ಜಾನ್ಸನ್​ ಕಾರನ್ನು ನಿಲ್ಲಿಸಿದ ವೇಳೆ ಪೊಲೀಸರಿಗೆ ಈ ಮೃತದೇಹದ ವಿಚಾರ ತಿಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...