alex Certify ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವ್ಯಕ್ತಿಗಳ ಮುಖ ಚಹರೆಯನ್ನು ರೋಬೋಟ್ ಗೆ ಅಳವಡಿಸಲು ಮುಂದಾದ ಕಂಪನಿ: ಒಪ್ಪಿಗೆ ನೀಡುವವರಿಗೆ ಭರ್ಜರಿ ಬಹುಮಾನ..!

Tech company will pay $130K to put your face on a line of robots

ಫಿಲಡೆಲ್ಫಿಯಾ ಮೂಲದ ರೋಬೋಟ್ ತಯಾರಕರು ವ್ಯಕ್ತಿಯ ಮುಖವನ್ನು ಶಾಶ್ವತವಾಗಿ ಬಳಸಲು ಸಮ್ಮತಿ ಸೂಚಿಸುವವರಿಗೆ ಸರಿಸುಮಾರು 1.5 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರೋಮೊಬಾಟ್ ಕಂಪನಿಯು ಶಾಪಿಂಗ್ ಮಾಲ್‌ಗಳು, ಹೋಟೆಲ್‌ಗಳು ಮತ್ತು ಇತರ ಜನನಿಬಿಡ ಸ್ಥಳಗಳಿಗೆ ಸಹಾಯಕರಾಗಿ ರೋಬೋಟ್‌ಗಳ ವಿನ್ಯಾಸಗೊಳಿಸುತ್ತಿದೆ ಹಾಗೂ ಇದನ್ನು ಅಭಿವೃದ್ಧಿಪಡಿಸುತ್ತಿದೆ.

ಹೀಗಾಗಿ ಕಂಪನಿಯು ದಯೆ ಮತ್ತು ಸ್ನೇಹಪರ ಇರುವಂತಹ ವ್ಯಕ್ತಿಗಳನ್ನು ಹುಡುಕುತ್ತಿದೆ. ವ್ಯಕ್ತಿಯ ಮುಖದ ಚಹರೆಯನ್ನೇ ಹೋಲುವ ರೋಬೋಟ್ ಅನ್ನು ನಿರ್ಮಿಸಲಾಗುತ್ತದೆ. ತಮ್ಮ ಮುಖವನ್ನು ಶಾಶ್ವತವಾಗಿ ಬಳಸಲು ಒಪ್ಪಿಗೆ ನೀಡುವ ವ್ಯಕ್ತಿಗೆ 1.5 ಕೋಟಿ ರೂ. ನಗದು ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ. ಒಪ್ಪಿಗೆ ಸೂಚಿಸುವ ವ್ಯಕ್ತಿಯ ಮುಖದೊಂದಿಗೆ ಅಭಿವೃದ್ಧಿಪಡಿಸಲಾದ ರೋಬೋಟ್ 2023 ರಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ಅಮೆರಿಕನ್ ಕಂಪನಿಯು ಚಿಲ್ಲರೆ ಅಂಗಡಿಗಳು, ಶಾಪಿಂಗ್ ಮಾಲ್‌ಗಳು ಮತ್ತು ವಿಮಾನ ನಿಲ್ದಾಣಗಳಿಗೆ ರೋಬೋಟ್ ನೇಮಕಕ್ಕೆ ನಿರ್ಧರಿಸಿದೆ.

’ಜೀವನದಲ್ಲಿ ಎಂದೂ ಮದ್ಯಪಾನ ಮಾಡೋದಿಲ್ಲ’: ಬಿಹಾರ ಪೊಲೀಸ್ ವರಿಷ್ಠರಿಂದ ಪ್ರಮಾಣವಚನ

ಮುಖ್ಯವಾದ ವಿಷಯವೇನೆಂದ್ರೆ ಪ್ರೋಮೊಬಾಟ್ ಕಂಪನಿಯು ವಯಸ್ಸು ಹೊಂದಿರುವ ಮುಖವನ್ನು ಹುಡುಕುತ್ತಿದೆ. ಈ ಬಗ್ಗೆ ಯಾರಾದರೂ ಆಸಕ್ತಿ ಹೊಂದಿದ್ದರೆ ಅಂಥವರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅದರಲ್ಲಿ ಪ್ರಶ್ನಾವಳಿಯನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

ಪ್ರಸ್ತುತ, ಕಂಪನಿಯು ಪ್ರೊಮೊಬೋಟ್ ವಿ4 ರೋಬೋಟ್ ಅನ್ನು ವಿಶ್ವವಿದ್ಯಾಲಯಗಳು, ವಿಮಾನ ನಿಲ್ದಾಣಗಳು, ವಸ್ತುಸಂಗ್ರಹಾಲಯಗಳು ಮತ್ತು ಶಾಪಿಂಗ್ ಮಾಲ್‌ಗಳಲ್ಲಿ ನಿಯೋಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...