
ಕಳ್ಳಸಾಗಣೆ ಮಾಡಲಾಗಿದ್ದ ಪುರಾತನ ಕಲಾಕೃತಿಗಳನ್ನ ವಾಪಸ್ ಪಡೆಯಲು ನ್ಯೂಯಾರ್ಕ್ ತನಿಖಾಧಿಕಾರಿಗಳು ನಡೆಸಿದ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದೂ ಹಾಗೂ ಬೌದ್ಧಿಸಂಗೆ ಸಂಬಂಧಿಸಿದ 27ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನ ಅಮೆರಿಕ ಕಾಂಬೋಡಿಯಾಗೆ ಕಳುಹಿಸಿಕೊಟ್ಟಿದೆ. ಈ ಪ್ರತಿಮೆಗಳು ಸರಿ ಸುಮಾರು 3.8 ಮಿಲಿಯನ್ ಡಾಲರ್ ಮೌಲ್ಯದ್ದಾಗಿವೆ ಎಂದು ಅಂದಾಜಿಸಲಾಗಿದೆ.
ಇದರಲ್ಲಿ ಹಲವಾರು ಹಿಂದೂ ಹಾಗೂ ಅಂಕೋರಿಯನ್ ಪ್ರತಿಮೆಗಳು ಇವೆ ಎನ್ನಲಾಗಿದೆ. ನಾಗನ ಮೇಲೆ ಧ್ಯಾನಸ್ಥನಾಗಿರುವ ಬುದ್ಧ, ಶಿವ ಹಾಗೂ ಬುದ್ಧನ ಮರಳುಗಲ್ಲಿನ ಶಿಲ್ಪ ಸೇರಿದಂತೆ ಅನೇಕ ಅಪರೂಪದ ಕಲಾಕೃತಿಗಳು ಇವಾಗಿವೆ ಎನ್ನಲಾಗಿದೆ.
ಗಮನಿಸಿ…! ಕರಾವಳಿ ಸೇರಿ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ
ಇನ್ನು ಈ ವಿಚಾರವಾಗಿ ಮಾತನಾಡಿದ ಕಾಂಬೋಡಿಯಾದ ಸಂಸ್ಕೃತಿ ಹಾಗೂ ಲಲಿತಕಲೆಗಳ ಸಚಿವ ಪೂರಂಗ್ ಸಕೋನಾ, ಈ ಪ್ರಾಚೀನ ವಸ್ತುಗಳು ನಮ್ಮ ದೇಶದ ಪೂರ್ವಜರ ಕಾಣೆಯಾದ ಆತ್ಮಗಳು ಎಂದು ಹೋಲಿಕೆ ಮಾಡಿದ್ದಾರೆ.
ಮ್ಯಾನ್ಹ್ಯಾಟನ್ ಆಂಟಿಕ್ವಿಟೀಸ್ ಕಳ್ಳಸಾಗಣೆ ಘಟಕ ಹಾಗೂ ಹೋಮ್ಲ್ಯಾಂಡ್ ಸೆಕ್ಯೂರಿಟಿ ತನಿಖಾದಳದ ಶೋಧದ ಬಳಿಕ ಪತ್ತೆ ಮಾಡಿದ 400 ವಸ್ತುಗಳನ್ನ ಸಂಬಂಧ ಪಟ್ಟ 10 ದೇಶಗಳಿಗೆ ಹಿಂದಿರುಗಿಸಲಾಗಿದ್ದು ಇದರಲ್ಲಿ ಕಾಂಬೋಡಿಯಾ ಕೂಡ ಒಂದಾಗಿದೆ.
ವಂಚಕ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾಗೊಳಿಸಿದ ಡೊಮಿನಿಕಾ ಕೋರ್ಟ್
ಅಮೆರಿಕದ ಅಧಿಕಾರಿಗಳು ಕಳೆದ ವಾರ ಸ್ಯಾನ್ ಫ್ರಾನ್ಸಿಸ್ಕೋ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ದಶಕಗಳ ಹಿಂದೆ ಕಳವು ಮಾಡಲಾಗಿದ್ದ ಕಲ್ಲಿನ ಕೆತ್ತನೆಗಳನ್ನ ಥೈಲ್ಯಾಂಡ್ಗೆ ಹಿಂದಿರುಗಿಸಿದೆ.